ಸುಮಾ ಗಸ್ತಿಗೆ ರಾಜ್ಯ ಸಭಾ ಸದಸ್ಯ ಸ್ಥಾನ ನೀಡಲು ಒತ್ತಯ

ರಾಯಚೂರು.ನ.14-ದಿ.ಅಶೋಕ್ ಗಸ್ತಿ ಅವರ ಪತ್ನಿಗೆ ರಾಜ್ಯ ಸಭಾ ನೀಡಿ ಮತ್ತು ತೀನ್ ಖಂದಿಲ್ ವೃತ್ತದಿಂದ ಅಶೋಕ್ ಡಿಪೋ ವೃತ್ತದ ವರೆಗೆ ರಸ್ತೆ ಅಗಲೀಕರಣ ಮಾಡಿ ರಸ್ತೆ ಕಾರ್ಯ ಪ್ರಾರಂಭಿಸಲು ರಾಯಚೂರು ನಗರ ಉಸ್ಮಾನಿಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಮಹಾವೀರ ಅವರು ಹೇಳಿದರು. ಅವರಿಂದು ಸುದ್ದಿಗರೊಂದಿಗೆ ಮಾತಾನಡುತ್ತ ಇತ್ತೀಚಿಗೆ ಕೋವಿಡ್19 ರೋಗಕ್ಕೆ ರಾಜ್ಯ ಸಭಾ ಸದಸ್ಯ ಅಶೋಕ್ ಗಸ್ತಿ ಅವರು
ಅಕಾಲಿಕ ಮರಣಹೊಂದಿದರೆ ಗಸ್ತಿ ಅವರು ಹಲವು ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ನಿಷ್ಪಕ್ಷಪಾತದಿಂದ ಶ್ರಮಿಸಿದ ಕಾರ್ಯಕರ್ತ ಆದಕಾರಣ ಅವರ ಧರ್ಮ ಪತ್ನಿ ಸುಮಾ ಗಸ್ತಿಯು ಪಧವೀದರರಾಗಿದ್ದು ಅವರಿಗೆ ರಾಜ್ಯ ಸಭಾ ಸದಸ್ಯ ಸ್ಥಾನ ನೀಡಬೇಕು ಎಂದರು.
ನಗರದ ತಿನ್ ಖಂದಿಲ್ ವೃತ್ತದಿಂದ ಅಶೋಕ್ ಡಿಪೋದ ವರೆಗೆ ರಸ್ತೆ ಅಗಲೀಕರಣ ,ರಸ್ತೆ ನಿರ್ಮಾಣ ಕಾರ್ಯ ಅನೇಕ ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದು ನೂತನ ಅಧ್ಯಕ್ಷರ ಸಾರಥ್ಯದಲ್ಲಿ ರಸ್ತೆ ಅಗಲೀಕರಣ ಮತ್ತು ಕಾಮಗಾರಿ ಕೆಲಸವನ್ನು ಕೊಡಲೇ ಪ್ರಾರಂಭಿಸಬೇಕು ಈಗಾಗಲೇ ಈ ರಸ್ತೆಗೆ ಸರ್ಕಾರದಿಂದ 4 ಕೋಟಿ 36 ಲಕ್ಷ ರೂ.ಅನುದಾನ ಬಿಡುಗಡೆ ಆಗಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಭುನಾಯಕ, ಎಂ.ಎಸ್.ಖಾನ್,ಬಸವರಾಜ,ಕೆ.ವಿ.ಖಾಜಪ್ಪ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.