ಸುಮಂಗಲೇಯರಿಗೆ ಅರಿಶಿಣ, ಕುಂಕುಮ ಮಂಗಳದೃವ್ಯ ವಿತರಣೆ

ಹುಮನಾಬಾದ್: ಆ.17:ಅಧಿಕ ಶ್ರಾವಣ ಮಾಸದ ಅಂಗವಾಗಿ ಇಲ್ಲಿನ ನಗರೇಶ್ವರ ದೇವಸ್ಥಾನದ ಹತ್ತಿರ ಇರುವ ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನ್ ಕಚೇರಿಯಲ್ಲಿ ಮಂಗಳವಾರ ಸುಮಂಗಲೇರಿಗೆ, ಅರಿಶಿಣ, ಕುಂಕುಮ ಸೇರಿದಂತೆ ಮಂಗಳದೃವ್ಯ ವಿತರಣೆ ಮಾಡಲಾಯಿತು.
ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನ ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಮಾತನಾಡಿ, ಬೆಂಗಳೂರಿನ ಮಹರ್ಷಿ ಆನಂದ ಗುರುಜೀ ಅವರ ಸಾಲಿ ಗ್ರಾಮ ಆಶ್ರಮದ ಲಕ್ಷ್ಮೇ ಭುವಹರ ಸ್ವಾಮಿಗೆ ಅರಿಶಿಣ, ಕುಂಕುಮ, ಮಂಗಳದೃವ್ಯದಿಂದ ವಿಶೇಷ ಪೂಜೆ, ಅರ್ಚನೆ ಮಾಡಿಸಿ ಮಂಗಳದೃವ್ಯ ತರಲಾಗಿದ್ದು, ಪಟ್ಟಣದ ಸುಮಂಗಲೇಯರು ಬಂದು ಈ ಮಹಾಪ್ರಸಾದವನ್ನು ವಿತರಿಸಲಾಗಿದೆ, ಎಂದರು.
ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್‍ನ ತಾಲ್ಲೂಕು ಉಪಾಧ್ಯಕ್ಷೆ ಶೋಭಾ ಗುರಮಿಟಕಲ್, ಕಾರ್ಯದರ್ಶಿ ಸುರೇಖಾ ವಿಭೂತಿ, ಕೋಶಾಧ್ಯಕ್ಷೆ ಸುಧಾರಾಣಿ ಪುಜಾರಿ, ಸದಸ್ಯರಾದ್ ಅನಿತಾ ಚಿದ್ರಿ, ದ್ರೋಪತಿ ಶಮಶಾಬಾದೆ, ವಿಮಲಾ ಸಂಗಮಕರ್, ಅನಿತಾ ಅಶೋಕ, ಉಮಾ ಕುಲಕರ್ಣಿ, ಸೇರಿದಂತೆ ಅನೇಕ ಸುಮಂಗಲೇಯರು ಇದ್ದರು.