ಸುಭಾಷ್ ಚಂದ್ರ ಬೋಸ್ 125ನೇ ಜನ್ಮ ವರ್ಷಾಚರಣೆ
 ರಾಜ್ಯ  ಜಿಲ್ಲಾ ಮಟ್ಟದ ಸ್ಪರ್ಧೆಗಳ ಉದ್ಘಾಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:  ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಬಳ್ಳಾರಿ ಜಿಲ್ಲಾ ಸಮಿತಿಯಿಂದ  ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವರ್ಷಾಚರಣೆಯ ಅಂಗವಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಇಂದು ಸಂಘಟಿಸಲಾಗಿತ್ತು.
 ಕಾರ್ಯಕ್ರಮವನ್ನು ಎ.ಎಮ್.ಎ ನ ಮಾಜಿ ಜಿಲ್ಲಾ ಕಾರ್ಯದರ್ಶಿ  ಡಾಕ್ಟರ್ ಗೋವರ್ದನ ಎಸ್ ರೆಡ್ಡಿ ಅವರು ನೇತಾಜಿಯವರ ಹೆಸರು ಬರೆಯುವ ಮೂಲಕ ಉದ್ಘಾಟಿಸಿ, ನೇತಾಜಿ ಅವರ ವಿಚಾರ ಮತ್ತು ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು, ನೇತಾಜಿಯವರಂತಹ ಹೋರಾಟದ ಪ್ರತಿಫಲದಿಂದ ನಾವು ಇಂದು ಸ್ವಾತಂತ್ರ್ಯರಾಗಿ ಜೀವಿಸುತ್ತಿದ್ದವೆ… ಎಂದು   ಹೇಳಿ, ಸ್ಪರ್ಧೆಗಳಲ್ಲಿ ಭಾಗವಹಿಸಲು ನೆರೆದಿದ್ದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.
 ಅತಿಥಿಗಳಾಗಿ ನ್ಯಾಯವ್ಯಾದಿ ಆರ್. ಸೋಮಶೇಖರ್ ಗೌಡ ಅವರು ನೇತಾಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನಡೆಸಿಕೊಟ್ಟರು.
  ಪ್ರಾಸ್ತಾವಿಕವಾಗಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ರವಿಕಿರಣ್.ಜೆ.ಪಿ… ಈ ಸ್ಪರ್ಧೆಗಳಲ್ಲಿ ವಿವಿಧ ಶಾಲಾ -ಕಾಲೇಜಿನ ಹಾಗೂ ತಾಲೂಕುಗಳಿಂದ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಗಳು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಒಂದು ಒಳ್ಳೆಯ ಉನ್ನತ ನೀತಿ -ನೈತಿಕತೆ ಬರಬೇಕು ಹಾಗೂ ನೇತಾಜಿ ಅವರ ಕುರಿತು ಎಲ್ಲಾ ವಿದ್ಯಾರ್ಥಿ ಸಮುದಾಯ ಸರಿಯಾದ ವಿಚಾರ ತಲುಪಲಿ ಎನ್ನುವ ಆಶಯ ಎಂದರು.
ಕಾರ್ಯಕ್ರಮದಲ್ಲಿ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷರು ಜೆ.ಸೌಮ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರಾದ ಕೆ.ಈರಣ್ಣ, ಕಾರ್ಯದರ್ಶಿ ಕಂಬಳಿ ಮಂಜುನಾಥ, ಜಿಲ್ಲಾ ಸೆಕ್ರಟೆರಿಯೇಟ್ ಸದ್ಯಸ್ಯರಾದ ಅನುಪಮಾ, ಸಿದ್ದು, ನಿಹಾರಿಕ, ಉಮಾ, ಪ್ರಮೋದ್ ಹಾಗೂ ಎಐಡಿಎಸ್‌ಓ ಜಿಲ್ಲಾ ಕಾರ್ಯಕರ್ತರುಗಳಾದ ಕಿರಣ್, ರವಿಕುಮಾರ್, ಉದ್ದೇಶ್ ನಾಯಕ್, ಸಮೀರ್ ಮುಂತಾದವರು ಉಪಸ್ಥಿತರಿದ್ದರು.