ಸುಭಾಷ್ ಚಂದ್ರ ಬೋಸ್‍ರವರ ಜನ್ಮದಿನೋತ್ಸವ ಆಚರಣೆ

ಸಂಜೆವಾಣಿ ನ್ಯೂಸ್
ಮೈಸೂರು: ಜ.24:- ಭಾರತೀಯ ಭೂಸೇನಾ ಸಂಸ್ಥಾಪಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127ನೇ ಜನ್ಮದಿನೋತ್ಸವದ ಅಂಗವಾಗಿ ಮೈಸೂರು ಸಮಾನಮನಸ್ಕರ ಬಳಗದ ವತಿಯಿಂದ ಮಂಡಿಮೊಹಲ್ಲಾ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಆಚರಿಸಲಾಯಿತು.
ದಿ. ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಪಡುವಾರಹಳ್ಳಿ ಎಂ. ರಾಮಕೃಷ್ಣ ರವರು ನೇತಾಜಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು, ನಂತರ ಅವರು ಮಾತನಾಡಿ ಬ್ರಿಟೀಷರ ವಿರುದ್ಧ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಮನೆಗೊಬ್ಬ ಯುವಕನನ್ನು ಸೇನಾನಿಯಾಗಿ ಸಂಘಟಿಸಿ ಯುವಕರೇ ರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಕರೆ ನೀಡದವರು ನೇತಾಜಿ ಸುಭಾಷ್ ಚಂದ್ರ ಬೋಸ್ ರವರು, ಭಾರತೀಯರು ನೆಮ್ಮದಿಯಾಗಿದ್ದೇವೆ ಎಂದರೆ ಅದಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ತ್ಯಾಗ ಮಹತ್ವವಾದುದು, ಹಾಗಾಗಿ ನೇತಾಜಿ ರವರ ಜನ್ಮದಿನೋತ್ಸವನ್ನು ಶಾಲಾ ಕಾಲೇಜಿನಲ್ಲಿ ಆಯೋಜಿಸಿ ಇಂದಿನ ಯುವಪೀಳಿಗೆಗೆ ಇತಿಹಾಸವನ್ನ ಪರಿಚಯಿಸುವಂತೆ ಶಿಕ್ಷಣ ಇಲಾಖೆ ಮುಂದಾಗಬೇಕಿದೆ ಎಂದರು
ಕಾರ್ಯಕ್ರಮದಲ್ಲಿ ದೇವರಾಜ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಸುಂದರ್ ಕುಮಾರ್ ,ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಕೀಲ ಪಡುವಾರಹಳ್ಳಿ ಎಂ ರಾಮಕೃಷ್ಣ, ನಗರಪಾಲಿಕೆ ಮಾಜಿ ಸದಸ್ಯ ಎಸ್.ಎಮ್ ನಂದಕುಮಾರ್,ಸಿಡಿ ಕುಮಾರ್, ಅಜಯ್ ಶಾಸ್ತ್ರಿ, ವಿಕ್ರಮ್ ಅಯ್ಯಂಗಾರ್, ಸೊಪ್ಪಿನಕೇರಿ ಬಿ. ಚಂದ್ರಶೇಖರ್, S.ಮಂಜು, ಹೆಚ್ ಎಸ್ ಪ್ರಕಾಶ್, ತಿಲಕ್ ನಗರದ ಆರ್. ರಾಜು,ಕೆ.ಚಂದ್ರಶೇಖರ್ ವರದರಾಜು, ಪಾಲ್ಕನ್ ಮಾದೇಗೌಡ, ದೊಡ್ಡೊಕ್ಕಲಗೇರಿಯ ಶಿವಕುಮಾರ್ ಗೌಡ ಇನ್ನಿತರರು ಇದ್ದರು.