ಸುಭಾಷ್ ಚಂದ್ರಭೋಸ್ ಜನ್ಮದಿನಾಚರಣೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.23: ಸ್ವತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125 ನೇಯ ಜನ್ಮ ದಿನಾಚರಣೆ, ಸಂಡೂರು ಸರ್ಕಾರಿ ಐಟಿಐ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ, ಇಂದು ಯುವಜನರು ಅನ್ಯಾಯದ ವಿರುದ್ಧ ಸಿಡಿದೇಳುವ ಕಿಡಿ, ನೇತಾಜಿ ಸುಭಾಷ್ ಚಂದ್ರಬೋಸ್ ರವರ ಆದರ್ಶಗಳನ್ನು  ಮೈಗೂಡಿಸಿಕೊಳ್ಳಬೇಕು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಇವರ ವಿಚಾರ ಇಂದು ನಾವು ತಿಳಿದುಕೊಳ್ಳಬೇಕಾಗಿದೆ. ಮಾನವನಿಂದ ಮಾನವನ ಶೋಷಣೆ ನಿಲ್ಲಲಿ ಸಮಾಜವಾದಿ ರಾಷ್ಟ್ರ ಅಂದರೆ ಎಲ್ಲರಿಗೂ ಎಲ್ಲಾ ಸವಲತ್ತು ಸಿಗುವಂತಹ ಸಮಾಜ ನಿರ್ಮಾಣದ ನೇತಾಜಿ ಅವರ ಕನಸನ್ನು ನಾವು ಇಂದು ನನಸು ಮಾಡುವ ನಿಟ್ಟಿನಲ್ಲಿ ಸಂಕಲ್ಪ ತೊಡಬೀಕಾಗಿದೆ. ಇಂದಿನ ನಮ್ಮ ಆಳುವ ಸರ್ಕಾರಗಳು ನೇತಾಜಿ ಅಂತಹವರ ವಿಚಾರಗಳನ್ನ ಮಾತನಾಡಲೂ ಭಯಪಡುತ್ತಿವೆ. ಮುಖ್ಯವಾಗಿ ಈ ವರ್ಷ 125ನೆಯ ಜನ್ಮವಾರ್ಷಿಕ. ಕನಿಷ್ಠಪಕ್ಷ ಗೌರವ ಸಲ್ಲಿಸಲು ಸಹ ನೀತಿ ನೈತಿಕತೆ ಇಲ್ಲದ ಸರ್ಕಾರಗಳು ವಿಧ್ಯಾರ್ಥಿ ಯುವಜನರನ್ನು ಇಂತಹ ಉನ್ನತ ವಿಚಾರಗಳಿಂದ ದೂರ ಇಡಲು ಅಶ್ಲೀಲ ಸಿನಿಮಾ ಸಾಹಿತ್ಯ, ಜಾಲತಾಣಗಳನ್ನು ಎಗ್ಗಿಲ್ಲದೇ ಪ್ರಚಾರ ಕೊಟ್ಟು ಯುವಜನತೆಯ ನೈತಿಕ ಬೆನ್ನೆಲುಬು ಮೂರಿಯುತ್ತಿವೆ. ಹಾಗಾಗಿ ಇವತ್ತಿನ ಈ ಸಂದರಭದಲ್ಲಿ ನೇತಾಜಿ ಅವರ ವಿಚಾರ ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು AIDYO ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಯುವಜನರಿಗೆ ಕರೆ ನೀಡಿದರು.