ಸುಭಾಷಚಂದ್ರ ಸಮ್ಮುಖದಲ್ಲಿ ನೂರಾರು ಜನ ಎಎಪಿಗೆ ಸೇರ್ಪಡೆ

ರಾಯಚೂರು,ಜು.೨೧-ಗ್ರಾಮೀಣ ಮತ ಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ತೊರೆದು ಗ್ರಾಮೀಣ ಮತ ಕ್ಷೇತ್ರದ ಆಕಾಂಕ್ಷಿ ಡಾ.ಸುಭಾಷಚಂದ್ರ ಅವರ ಸಮ್ಮುಖದಲ್ಲಿ ನೂರಾರು ಜನರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲೂಕಿನ ಹುಣಿಸಿಹಾಳ ಹುಡಾ ಗ್ರಾಮದಲ್ಲಿ ನೂರಾರು ಜನರನ್ನು ಡಾ.ಸುಭಾಷಚಂದ್ರ ಅವರು ಪಕ್ಷಕ್ಕೆ ಬರಮಾಡಿಕೊಂಡರು. ಡಾ.ಸುಭಾಷಚಂದ್ರ ಅವರು ಮಾತನಾಡಿ ಆಮ್ ಆದ್ಮಿ ಪಕ್ಷ ದೆಹಲಿ ಪಂಜಾಬ್ ಸರ್ಕಾರ ರಚಿಸಿಕೊಂಡು ಬಡವರಿಗೆ ಜನಸಾಮಾನ್ಯರಿಗೆ ಹಲವಾರು ಉಚಿತ ಸೌಲಭ್ಯಗಳನ್ನು ನೀಡಲಾಗಿದೆ. ಅಲ್ಲಿನ ಸೌಲಭ್ಯಗಳನ್ನು ಪಡೆಯಬೇಕಾದರೆ ಕರ್ನಾಟಕದಲ್ಲಿಯು ಎಎಪಿ ಅಧಿಕಾರಕ್ಕೆ ತರಬೇಕು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟ ಪಕ್ಷಗಳನ್ನು ಕರ್ನಾಟಕದಿಂದ ಕಿತ್ತೆಸೆಯೋಣ ಎಂದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಎಪಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಜೋನ್ ಉಸ್ತುವಾರಿಗಳಾದ ಕೆ.ಬಸವರಾಜ ಗುತ್ತೇದಾರ ಮತ್ತು ಗ್ರಾಮೀಣ ಸಂಘಟನಾ ಕಾರ್ಯದರ್ಶಿಗಳಾದ ಆರ್.ವೀರೇಶ್ ಮತ್ತು ನಗರ ಘಟಕದ ಅಧ್ಯಕ್ಷ ಹಾಗೂ ನಗರ ಕ್ಷೇತ್ರದ ಆಕಾಂಕ್ಷಿಗಳಾದ ವೀರೇಶ್.ಆರ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.