ಸುಭದ್ರ ಭಾರತಕ್ಕಾಗಿ ಮೋದಿ ಗೆಲ್ಲುವುದು ಅಗತ್ಯ-ಸಿ.ಎಸ್.ಪಾಟೀಲ್

ಸಂಜೆವಾಣಿ ವಾರ್ತೆ
ದೇವದುರ್ಗ.ಮೇ.೦೨- ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ದೇಶದಲ್ಲಿ ಅಭಿವೃದ್ಧಿಗೆ ವೇಗದೊರೆತಿದ್ದು ವಿದೇಶದಲ್ಲಿ ಭಾರತಕ್ಕೆ ಗತ್ತುಬಂದಿದೆ. ಸುಭದ್ರ ಭಾರತಕ್ಕಾಗಿ ಬಿಜೆಪಿ ಗೆಲ್ಲುವುದು ಅಗತ್ಯವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಹಾಗೂ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಸಿ.ಎಸ್.ಪಾಟೀಲ್ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಮೋದಿ ಬಂದನಂತರ ಹಲವು ಕೆಲಸ ಆಗುತ್ತಿದ್ದು ಬಡವರಿಗೆ ಅನುಕೂಲವಾಗಿದೆ. ದೇಶದ ಭದ್ರತೆಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಹೀಗಾಗಿ ಸಮಾನ ಮನಸ್ಕರ ವೇದಿಕೆ ಸಭೆ ಸೇರಿ ತೀರ್ಮಾನ ಕೈಗೊಂಡಿದ್ದೇವೆ. ದೇಶದ ಹಿತಕ್ಕಾಗಿ ಪಕ್ಷಭೇದ ಮರೆತು ಮೋದಿಗೆ ಬೆಂಬಲಿಸಲು ನಿರ್ಧರಿಸಿದ್ದೇವೆ. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರಕೆಲಸ ಮಾಡಲಾಗುವುದು ಎಂದರು.
ಸಂಸದ ರಾಜಾಅಮರೇಶ್ವರ ನಾಯಕ, ನಾರಾಯಣಪುರ ಬಲದಂಡೆ ನಾಲೆಗೆ ನೀರಿನ ಕೊರತೆಯಾದಾಗ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಒತ್ತಡ ಹಾಕಿ ಹೆಚ್ಚುವರಿ ನೀರು ಹರಿಸಿದ್ದಾರೆ. ಇದರಿಂದ ರೈತರು ಪೂರ್ಣಪ್ರಮಾಣದಲ್ಲಿ ಬೆಳೆ ಪಡೆಯಲು ಸಾಧ್ಯವಾಯಿತು. ಅಲ್ಲದೆ ರೈಲ್ವೆ, ಭಾರತ ಮಾಲಾ ಯೋಜನೆಯಡಿ ಹೆದ್ದಾರಿ ಅಭಿವೃದ್ಧಿಗೆ ಹಲವು ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಾಗೂರು, ನಿಲುವಂಜಿ, ಕರ್ಕಿಹಳ್ಳಿ ಸೇರಿ ವಿವಿಧೆಡೆ ಬ್ರಿಡ್ಜ್ ಕಂ ಬ್ಯಾರೇಜ್, ಕಿರು ಜಲಾಶಯ ನಿರ್ಮಾಣ ಮಾಡಲು ಒತ್ತಾಯಿಸಲಾಗಿದೆ.
ತಾಲೂಕಿನ ಸಮಸ್ಯೆಗಳ ವಿರುದ್ಧ ಪಕ್ಷಾತೀತವಾಗಿ ಧ್ವನಿ ಎತ್ತಿದ್ದೇವೆ. ಬ್ರಿಡ್ಜ್ ಕಂ ಬ್ಯಾರೇಜ್, ಕುಡಿವ ನೀರಿನ ವಿಷಯವಾಗಿ ಕೆ.ಶಿವನಗೌಡ ನಾಯಕಗೆ ಒತ್ತಾಯ ಮಾಡಿದ್ದೇವೆ. ಶಾಸಕಿ ಕರೆಮ್ಮ ಜಿ.ನಾಯಕ ಪುತ್ರ, ಬೆಂಬಲಿಗರು ಪೊಲೀಸರ ಮೇಲೆಹಲ್ಲೆ ಮಾಡಿದ ಘಟನೆ ಖಂಡಿಸಿದ್ದೇವೆ. ಪ್ರಕರಣದಲ್ಲಿ ಪೊಲೀಸರದ್ದೂ ತಪ್ಪು ಇತ್ತು. ಖಾಲಿಟ್ರ್ಯಾಕ್ಟರ್ ಹಿಡಿದು ತಬ್ಬಾಳಿಕೆ ಮಾಡಿದ್ದಾರೆ. ಯಾರೇ ತಪ್ಪು ಮಾಡಿದರೂ ಪಕ್ಷಾತೀತವಾಗಿ ಖಂಡಿಸಿದ್ದೇವೆ.
ತಾಲೂಕಿನ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲಾಗಿದೆ. ಮರಳು ಮಾಫಿಯಾ, ಮಟ್ಕಾ ದಂಧೆ, ಜೂಜಾಟ ಬಗ್ಗೆ ಹೋರಾಟ ಮಾಡಲಾಗುವುದು. ಕರ್ತವ್ಯನಿರತ ಪೊಲೀಸರ ಮೇಲೆ ಶಾಸಕಿ ಕರೆಮ್ಮ ಜಿ.ನಾಯಕ ಮಗ ಸಂತೋಷ ಹಲ್ಲೆ ಮಾಡಿ ಘಟನೆ ಖಂಡನೀಯ. ಅಂದೆ ಶಾಸಕರಿಗೆ ನಾವು ಎಚ್ಚರಿಕೆ ನೀಡಿದ್ದೇವು. ತಾಲೂಕಿನ ಅಭಿವೃದ್ಧಿಗೆ ಕೆಲಸ ಮಾಡಿ, ಗುಂಡಾಗಿರಿ ಮಾಡಬೇಡಿ ಎಂದು. ಅಕ್ರಮ ಚಟುವಟಿಕೆಗಳ ವಿರುದ್ಧ ದೇವದುರ್ಗ ಹಿತರಕ್ಷಣಾ ವೇದಿಕೆ ಕಟ್ಟಿಕೊಂಡು ಹೋರಾಟ ಮಾಡಲಾಗುವುದು ಎಂದರು.
ಮುಖಂಡರಾದ ಚಂದ್ರಶೇಖರ ಪಾಟೀಲ್ ಮಿಯ್ಯಾಪುರ, ವೆಂಕಟರಾಯ ಬೆನಕನ್, ಉದ್ಯಮಿ ಪ್ರಕಾಶ ಖೇಣೇದ್, ಬಸವರಾಜ ಗಾಣಧಾಳ, ಶೀಖರೇಶ ಪಾಟೀಲ್, ನಾಗರಾಜ್ ಪಾಟೀಲ್, ನೀಲಗಲ್, ಮಹೇಶ ಮಸಿಹಾಳ್, ಶರಣಪ್ಪಗೌಡ ಕೊಪ್ಪರ, ಖಂಡೇರಾಯ ಹಳ್ಳಿ ಇತರರಿದ್ದರು