ಸುಭದ್ರಮ್ಮ ಮನ್ಸೂರು ಸ್ಮರಣೆ
ಕುತುಕ್ಷೇತ್ರ ನಾಟಕ‌ ಪ್ರದರ್ಶನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.18: ನಗರದ  ರಾಘವ ಕಲಾಮಂದಿರದಲ್ಲಿ ದಿ. ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರ ಸ್ಮರಣಾರ್ಥವಾಗಿ ಗಾನಯೋಗಿ ಲಿಂ ಪಂ ಪಂಚಾಕ್ಷರಿ ಕಲಾ ಟ್ರಸ್ಟ್ ಸೂಲದಹಳ್ಳಿ ಇವರಿಂದ  ಪುಟ್ಟಸ್ವಾಮಿ ಯವರ ರಚನೆಯ  “ಕುರುಕ್ಷೇತ್ರ “ಪೌರಾಣಿಕ ನಾಟಕವನ್ನು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜು 16 ರಂದು ಪ್ರದರ್ಶನ ಮಾಡಲಾಯ್ತು. 
ನಾಡೋಜ ಬೆಳಗಲ್ಲು ವೀರಣ್ಣ,  ರಂಗಕಲಾವಿದ ಗಾದಿಗನೂರು ಹಾಲಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ
ಚೋರನೂರು ಕೋಟ್ರಪ್ಪ. ಹಿರಿಯ ರಂಗಕಲಾವಿದೆ.  ಎ. ವರಲಕ್ಷ್ಮಿ ಮೊದಲಾದವರು ಸುಭದ್ರಮ್ಮ ಮನ್ಸೂರು ಅವರ ಭವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಕಲಾ ಸೇವೆ, ಗಾಯನವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ  ಮಂಜುನಾಥ ಮನ್ಸೂರ್. ಪತ್ರಕರ್ತರಾದ ಯಾಳ್ಪಿ ವಲಿಬಾಷ,  ಬಜಾರಪ್ಪ ಮೊದಲಾದವರು ಉಪಸ್ಥಿತರಿದ್ದರು.
ನಂತರ ರಾಜ್ಯದ ಹಲವು ಕಡೆಗಳಿಂದ ಬಂದಿದ್ದ ಕಲಾವಿದರಿಂದ  ಕುರುಕ್ಷೇತ್ರ ನಾಟಕ ಪ್ರದರ್ಶನ ಮಾಡಲಾಯ್ತು.   ಬಿ. ಶಿವಕುಮಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕೂಡ್ಲಿಗಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ತಿಪ್ಪೇಸ್ವಾಮಿ ಪೌರಾಣಿಕ ಡ್ರಾಮಾ ಹಾರ್ಮೋನಿಯಂ ಮಾಸ್ತರ್ ಕೂಡ್ಲಿಗಿ ಇವರು ಇದ್ದರು.

Attachments area