ಸುಫಿಯಾ ಬೇಗಂ ಅಧ್ಯಕ್ಷೆ, ಸುಕುಮುನಿ ಉಪಾಧ್ಯಕ್ಷ

ಮಾನ್ವಿ.ನ.10- ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸುಫಿಯಾ ಬೇಗಂ ಗಂಡ ಜಿಲಾನಿ ಕುರುಷಿ, ಉಪಾಧ್ಯಕ್ಷರಾಗಿ ಸಮಾಜವಾದಿ ಪಕ್ಷದಿಂದ ಕೆ.ಸುಕುಮುನಿ ತಂದೆ ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮಹಿಳೆ ಮೀಸಲಾಗಿತ್ತು. ಹಿಂದುಳಿದ ವರ್ಗ (ಎ) ಮಹಿಳೆ ಮೀಸಲಾತಿಯಲ್ಲಿ ಕಾಂಗ್ರೆಸ್‌ನಿಂದ 3 ಜನ, ಸಮಾಜವಾದಿ ಪಕ್ಷದಿಂದ ಒಬ್ಬರು, ಪಕ್ಷಾಂತರದಿಂದ ಒಬ್ಬರು ಒಟ್ಟು ಜನ ಚುನಾವಣೆಯಲ್ಲಿ ಗೆದ್ದವರ ಪೈಕಿ ಕಾಂಗ್ರೆಸ್‌ನಿಂದ ಸುಫಿಯಾ ಬೇಗಂ ಗಂಡ ಜಿಲಾನಿ ಕುರುಷಿ ಅವರು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರು ನಾಮಪತ್ರ ಸಲ್ಲಿಸದೇ ಇರುವುದರಿಂದ ಅವಿರೋಧವಾಗಿ ಆಯ್ಕೆಘೋಷಿಸಲಾಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಇರುವುದರಿಂದ ಪರಿಶಿಷ್ಟ ಜಾತಿಯಲ್ಲಿ 4 ಜನ ಗೆದ್ದವರ ಪೈಕಿ ಸಮಾಜವಾದಿ ಪಕ್ಷದಿಂದ ಕೆ.ಸುಕುಮುನಿ ತಂದೆ ಹನುಮಂತಪ್ಪ ನಾಮಪತ್ರ ಸಲ್ಲಿಸಲಾಗಿತ್ತು. ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರರಾದ ಶಂಶಾಲಂ ಅವರು ಆದೇಶ ಹೊರಡಿಸಿದರು. ಪುರಸಭೆ ಮುಖ್ಯಾಧಿಕಾರಿ ಜಗದೀಶ ಭಂಡಾರಿ ಅವರು ಉಪಸ್ಥಿತರಿದ್ದರು.