ಸುಪ್ರೀಂ ರಚಿಸಿರುವ ಸಮಿತಿ ಕಾಯ್ದೆ ಪರ: ರೈತರ ಅತೃಪ್ತಿ

ನವದೆಹಲಿ, ಜ.12- ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತಡ ಆಗ್ರಹಿಸಿ ಹೋರಾಟ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಗೆ ರೈತರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಿದ್ದರಿಲ್ಲ ಕೇಂದ್ರ ಸರ್ಕಾರ ಕೂಡಲೇ ನೂತನ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತ ನಾಯಕರು ಆಗ್ರಹಿಸಿದ್ದಾರೆ.

ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ಕೃಷಿ ಕಾಯ್ದೆಗಳ ಪರವಾಗಿದೆ. ಇಂಥವರಿಂದ ರೈತರಿಗೆ ನ್ಯಾಯ ಸಿಗಲು ಹೇಗೆ ಸಾಧ್ಯ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಸುಪ್ರೀಂಕೋರ್ಟ್ ರಚಿಸುವ ಯಾವುದೇ ಸಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನಾವು ನೆನ್ನೆಯೇ ಸಂಬಂಧ ಸ್ಪಷ್ಟ ಪಡಿಸಿದ್ದೇವೆ ಹೇಗಿದ್ದರೂ ಸುಪ್ರೀಂಕೋರ್ಟ್ ಸಮಿತಿಯನ್ನು ರಚನೆ ಮಾಡಿದ ಈ ಸಮಿತಿಯಲ್ಲಿ ಇರುವ ಎಲ್ಲರೂ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಪರವಾಗಿರುವವರು ಎಂದು ಅವರು ಹೇಳಿದರು.

ಹೋರಾಟ ಮುಂದುವರಿಕೆ:

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಅನುಷ್ಠಾನಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದರೂ ಹೋರಾಟ ಮುಂದುವರೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಸದಸ್ಯ ಬಲ್ಬೀರ್ ಸಿಂಗ್ ರಾಜೇವಾಲ ಅವರು ತಿಳಿಸಿದ್ದಾರೆ.

ನಾಲ್ವರ ಸಮಿತಿ:

ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಹರ್ ಸಿಮ್ರನ್ ಮಾನ್, ಕೃಷಿ ಆರ್ಥಿಕ ತಜ್ಞ ಡಾ, ಪ್ರಮೋದ್ ಕುಮಾರ್ ಜೋಶಿ, ಶೆಟ್ಕರಿ ಸಂಘಟನೆಯ ಅಶೋಕ್ ಗುಲಾಟಿ, ಅನಿಲ್ ಗಾಂವಾಂತ್ ಇದ್ದಾರೆ‌.

ಇವರೆಲ್ಲರೂ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳ ಪರವಾಗಿದ್ದಾರೆ ಇಂತಹ ಸಮಿತಿ ಸದಸ್ಯರಿಂದ ರೈತರು ನ್ಯಾಯ ನಿರೀಕ್ಷಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ