ರಾಮನಗರ.ಸೆ೨೬:ಹದಿನೈದು ದಿನಗಳ ಕಾಲ ಪ್ರತಿನಿತ್ಯ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎನ್ನುವ ಕಾವೇರಿ ಜನ ನಿರ್ವಹಣಾ ಪ್ರಾಧಿಕಾರದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿರುವುದು ಕನ್ನಡಿಗರ ಪಾಲಿಗೆ ಈ ತೀರ್ಪ ಮರಣ ಶಾಸನವಾಗಿದೆ. ನೀರು ಬಿಡುವಂತೆ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಕವಾಗಿದೆ.
ಕೆಆರ್‌ಎಸ್‌ನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಕಾವೇರಿಕೊಳ್ಳದ ರೈತರ ಬೆಳೆಗೆ ನೀರಿಲ್ಲ ಮತ್ತು ಬೆಂಗಳೂರು ನಗರದಲ್ಲಿ ಒಂದು ಕೋಟಿ ೩೦ ಲಕ್ಷ ಜನರಿಗೆ ಕುಡಿಯುವ ನೀರಿಗಾಘಿ ಕಾವೇರಿ ನದಿಯನ್ನು ನಂಬಿರುತ್ತಾರೆ. ಇನ್ನೂ ರಾಜ್ಯ ಜನತೆಗೆ ಕುಡಿಯುವ ನೀರಿನ ಅಭಾವವಿದ್ದು,
ಇದರಿಂದ ಭರದಿಂದ ತತ್ತರಿಸುವ ನಾಡಿನ ಜನರ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಪಾಯವಿದೆ. ನೀರಿಲ್ಲದೆ ಜನ ತೊಂದರೆ ಅನುಭವಿಸುತ್ತಿದ್ದು, ನೀರಾವರಿ ತಜ್ಜರ ಅಅಂದಾಜಿನಂತೆ ಕರ್ನಾಟಕಕ್ಕೆ ಕುಡಿಯುವ ನೀರು ಸೇರಿದಂತೆ ಅಗತ್ಯ ಸಂಗತಿಗಳಿಗೆ ೧೦೬ ಟಿ.ಎಂ.ಸಿ ನೀರಿನ ಅಗತ್ಯವಿದ್ದು, ಸದ್ಯ ನಮ್ಮಲ್ಲಿರುವುದು ೫೨ ಟಿ.ಎಂ.ಸಿ ನೀರು ಮಾತ್ರ. ವಾಡಿಕೆಯಂತೆ ಕಾವೇರಿಗೆ ಪ್ರದೇಶದಲ್ಲಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳು ಮಳೆಯಾಗಿದೆ ಬರಗಾಲ ಅನುಭವಿಸುತ್ತಿದ್ದು, ಇನನೂ ಕರ್ನಾಟಕದಲ್ಲಿ ಸೆಪ್ಟಂಬರ್ ನಂತರ ಮಳೆ ಆಗುವುದಿಲ್ಲ. ಆದರೆ ತಮಿಳುನಾಡಿನಲ್ಲಿ ಸೆಪ್ಟಂಬರ್ ನಂತರ ಮಳೆ ಆರಂಭವಾಗಲಿದ್ದು, ಜೊತೆಗೆ ಅಂತರ್ಜಲ ಪ್ರಮಾಣ ಅಲ್ಲಿ ಹೆಚ್ಚಾಗಿದೆ. ಅಲ್ಲಿನ ಕುರುವೈ ಬೆಳೆಗೆ (ಮಳೆಗಾಲದ ಬೆಳೆಗೆ) ನೀರನ್ನು ಕೇಳುತ್ತಿರುವುದು ದುರದೃಷ್ಟಕರ. ಈಗಾಗಲೇ ಕನ್ನಡಿಗರು ಕಾನೂನಿಗೆ ಗೌರವ ಕೊಟ್ಟು ನಿರಂತರವಾಗಿ ಪಾಲನೆ ಮಾಡಿಕೊಂಡು ಬರುವ ಸಜ್ಜನಿಕೆಯನ್ನು ಹೊಂದಿದವರು. ಆದರೆ ಈ ಗುಣವೇ ಅವರಿಗೆ ಮಾರಣಾಂತಿಕವಾಗಿ ಪರಿಣಮಿಸಿದೆ. ನಮ್ಮ ಮನೆಗೆ ಬೆಂಕಿ ಹಚ್ಚಿ ಬೇರೆಯವರಿಗೆ ದಾರಿಯನ್ನು ತೋರುವ ಕಠಿಣ ಸ್ಥಿತಿ ಬಂದಿರುವುದು ನಿಜಕ್ಕೂ ವಿಷಾದಕರವಾಗಿದೆ.
ಕನ್ನಡ ನಾಡು, ನುಡಿ, ನೆಲ, ಜಲ ಇವುಗಳಿಗೆ ಧಕ್ಕೆಯುಂಟಾಗುವ ಸಂದರ್ಭ ಒದಗಿ ಬಂದಾಗ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಸದಾ ಮುಂಚೂಣೆಯಲ್ಲಿ ನಿಂತು ಹೋರಾಟವನ್ನು ನಡೆಸಿಕೊಂಡು ಬಂದಿದೆ. ನಾಡು, ನುಡಿ, ನೆಲ, ಜಲ ಭಾಷೆ ವಿಷಯವಾಗಿ ಯಾವ ಹಿಂಜರಿಕೆಯೂ ಇಲ್ಲದೇ ಹೋರಾಟ ಮಾನಡೆಸಿಕೊಂಡು ಬರುತ್ತಿದ್ದು, ಕಾವೇರಿ ಹೋರಾಟದಲ್ಲಿ ಬೆಂಬಲ ವ್ಯಕ್ತಪಡಿಸಿ. ಕನ್ನಡ ನಾಡಿನ ನೆಲ, ಜಲ ಭಾಷೆ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಕರ್ನಾಟಕ ರಾಜ್ಯದ ರೈತ ಸಂಘನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಹಮ್ಮಿಕೊಳ್ಳುವ ಹೋರಾಟಗಳಿಗೆ ಎಲ್ಲ ರೀತಿಯಲ್ಲೂ ಸಂಪೂರ್ಣ ಬೆಂಬಲ ನೀಡಲು ಸದಾ ಸಿದ್ದವಾಗಿದೆ.