
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ7: ವಿಶ್ವವಿಖ್ಯಾತ ಹಂಪಿಗೆ ಸುಪ್ರಿಂಕೋರ್ಟ್ ನ್ಯಾಯಾಮೂರ್ತಿ ರವೀಂದ್ರ ಭಟ್ ಅವರ ಧರ್ಮಪತ್ನಿ ಶ್ರೀಮತಿ ಲಲಿತ್ ಮೋಹಿನಿ ಭಟ್ ಭೇಟಿ ನೀಡಿ, ವಿರೂಪಾಕ್ಷೇಶ್ವರ ಹಾಗೂ ಪಂಪಾದೇವಿ ದರ್ಶನ ಪಡೆದರು.
3 ದಿನಗಳ ಹಂಪಿ ಪ್ರವಾಸದಲ್ಲಿರುವ ನ್ಯಾಯಮೂರ್ತಿ ಅವರು, ಯಂತ್ರೋದ್ಧಾರಕ ಆಂಜನೇಯ ದೇವಾಲಯ, ಕೋದಂಡತಾಮ ದೇವಾಲಯ, ಕಡ್ಲೆಕಾಳು ಗಣಪತಿ, ಸಾಸುವೆಕಾಳು ಗಣಪತಿ, ಉಗ್ರ ನರಸಿಂಹ, ಅಚ್ಯುತರಾಯ ದೇವಾಲಯ ಸ್ಮಾರಕಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಬಳಿಕ ಕುಟುಂಬ ಸಮೇತ ತುಂಗಭದ್ರಾ ನದಿಯಲ್ಲಿ ದೋಣಿ ವಿಹಾರ ನಡೆಸಿದರು. ಇಂದು ಕೂಡ ಇತರೆ ಸ್ಮಾರಕ ಹಾಗೂ ದೇವಸ್ಥಾನಗಳಿಗೆ ನ್ಯಾಯಮೂರ್ತಿಗಳು ಭೇಟಿ ನೀಡಲಿದ್ದಾರೆ.