ಸುಪಾರಿ ನೀಡಿ ಮಗನನ್ನು ಕೊಲ್ಲಿಸಿದ ತಾಯಿ

ವಿಜಯಪುರ,ಅ 9: ಹೆತ್ತ ಮಗನಿಗೆ ಸುಪಾರಿ ನೀಡಿ ಮಗನನ್ನೇ ಕೊಲೆ ಮಾಡಿಸಿರುವ ತಾಯಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಮಲ್ಲಿಕಾರ್ಜುನ ಯಕ್ಕುಂಡಿ ಕೊಲೆಯಾದ ದುರ್ದೈವಿ.
ತಾಯಿ ಶ್ರೀದೇವಿ ಯಕ್ಕುಂಡಿ, ಪ್ರಕಾಶ ಗೊಲ್ಲರ್, ರಾಹುಲ್ ಗೊಲ್ಲರ್, ರಾಘವೇಂದ್ರ ಸಾಠೆ, ಸಂತೋಷ ಬಿದರಿ ಬಂಧಿತ ಆರೋಪಿಗಳು. ದಿನನಿತ್ಯ ಕುಡಿದ ನಶೆಯಲ್ಲಿ ತಾಯಿ ಶ್ರೀದೇವಿಗೆ ಮಗ ಮಲ್ಲಿಕಾರ್ಜುನ ಕಿರುಕುಳ ನೀಡುತ್ತಿದ್ದನು. ಅದಕ್ಕಾಗಿ ಶ್ರೀದೇವಿ ಬೇಸತ್ತು ಮಗನ ಹತ್ಯೆಗೆ ಸುಪಾರಿ ನೀಡಿದ್ದಳು. ಆರೋಪಿಗಳು ಮಲ್ಲಿಕಾರ್ಜುನನ್ನು ಹತ್ಯೆಗೈದು ವಿಜಯಪುರದ ಗಾಂಧಿನಗರ ಬಳಿಯ ಖಣಿಯಲ್ಲಿ ಎಸೆದು ಪರಾರಿಯಾಗಿದ್ದರು. ಈ ಕುರಿತು ವಿಜಯಪುರ ಎಪಿಎಂಸಿ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.