ಸುನಂದಾ ಬಿರಾದಾರಗೆ ಪಿ.ಎಚ್.ಡಿ ಪದವಿ

????????????????????????????????????

ವಿಜಯಪುರ, ಏ.9-ಬಿ.ಎಲ್.ಡಿ.ಇ ಸಂಸ್ಥೆ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಇಂಜನಿಯರಿಂಗ್ ಕಾಲೇಜು ಕಂಪ್ಯೂಟರ್ ವಿಭಾಗ ಪ್ರಾಧ್ಯಾಪಕಿ ಸುನಂದಾ ಬಿರಾದಾರ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪಿ.ಎಚ್.ಡಿ ನೀಡಿ ಗೌರವಿಸಿದೆ.
ಪ್ರೊ.ಪ್ರೇಮ ಅಕ್ಕಸಾಲಿಗರ ಅವರ ಮಾರ್ಗದರ್ಶನದಲ್ಲಿ “ಅನಾಲೆಸಿಸ್ ಆಫ್ ಮೆಡಿಕಲ್ ಅಲ್ಟ್ರಾಸೌಂಡ್ ಇಮೇಜಸ್ ಫಾರ್ ರೆನಾಲ್ ಕ್ಯಾಲಕುಲಸ್ ಆ್ಯಂಡ್ ಪಾಲಿಸ್ಟಿಕ್ ಕಿಡ್ನಿ ಡಿಸಿಜ್” ಸಂಶೋಧನೆ ಕೈಗೊಂಡಿದ್ದರಿಂದ ತಾಂತ್ರಿಕ ವಿವಿ ಸುನಂದಾ ಅವರಿಗೆ ಪಿ.ಎಚ್.ಡಿ ನೀಡಿದೆ.
ಕಾಲೇಜು ಪ್ರಾಚಾರ್ಯ ಡಾ.ಅತುಲ್ ಆಯಿರೆ ಆಡಳಿತ ಮಂಡಳಿ ವರ್ಗ ಸುನಂದಾ ಅವರ ಶೈಕ್ಷಣಿಕ ಸಾಧನೆಗೆ ಶುಭಹಾರೈಸಿದ್ದಾರೆ