ಸುಧೀರ ಹೆಗಡೆಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ

ಕಲಬುರಗಿ,ಜ.27: ಬೆಂಗಳೂರಿನ ಮಾನವಹಕ್ಕು ಆಯೋಗದ ಡಿಎಸ್ಪಿ ಸುಧೀರ ಮಹದೇವ ಹೆಗಡೆ ಹುಲೇಮಳಗಿ ಅವರಿಗೆ
ರಾಷ್ಟ್ರಪತಿಗಳ ವಿಶಿಷ್ಟ ಪೆÇಲೀಸ್ ಸೇವಾಪದಕ ಘೋಷಣೆಯಾಗಿದೆ.
ಅತ್ಯಂತ ಕಠಿಣ ಅಪರಾಧಗಳನ್ನ ಅದರ ಒಂದು ಅಂತ್ಯಕ್ಕೆ ತಲುಪಿಸಿ ಹೆಚ್ಚಿನ ಪ್ರಮಾಣದ ಶಿಕ್ಷೆಗೊಳಗಾಗುವಂತೆ
ಮಾಡುವಲ್ಲಿ ಇವರು ಅತ್ಯಂತ ಕರ್ತವ್ಯನಿಷ್ಠರಾಗಿದ್ದಾರೆ. ಈಗಾಗಲೇಸಿಎಂ ಪದಕ, ರಾಜ್ಯ ಪಾಲರ ಪ್ರಶಸ್ತಿ, ನಮ್ಮನೆ ಪ್ರಶಸ್ತಿ, ಸ್ವರ್ಣವಲ್ಲೀ ಮಠದ ಸುರಕ್ಷಾ ಸುಧೀರ ಪ್ರಶಸ್ತಿ, ರಾಷ್ಟ್ರಪತಿಗಳ ಶ್ಲಾಘನೀಯಸೇವಾ ಪದಕ,ಕೇಂದ್ರ ಗೃಹ ಸಚಿವರ ಉತ್ತಮ ತನಿಖಾಧಿಕಾರಿ ಪ್ರಶಸ್ತಿ, ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳೂ ಸಂದಿವೆ ಎಂಬುದು ಉಲ್ಲೇಖನೀಯ.