ರಾಯಚೂರು,ಮಾ.೨೯- ಮಾನ್ವಿ ತಾಲೂಕಿನ ಅಮರಾವತಿ ಗ್ರಾಮದಲ್ಲಿ ರಸ್ತೆ ಸುಧಾರಣೆ ಮಾಡಲು ಶಾಸಕರಾದ ರಾಜವೆಂಕಟಪ್ಪ ನಾಯಕ್ ಅವರು ಶ್ರಮ ಪಟ್ಟು ಅನುದಾನ ನೀಡಿದ್ದಾರೆ ಆದರೆ ಅವುಗಳು ಯಾವು ಸರಿಯಾದ ಕ್ರಮದಲ್ಲಿ ನಡೆಯುತ್ತಿಲ್ಲವೆಂದು ಗುತ್ತೇದಾರರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ಸುವರ್ಣ ಗ್ರಾಮ ಸೇರಿದಂತೆ ರಸ್ತೆಗಳಿಗೆ ಒಟ್ಟು ಅಂದಾಜು ೫ ಕೋಟಿ ಹಣ ಮಂಜೂರಿಯಾಗಿದೆ. ಅಮರಾವತಿ -ಕೊಟ್ನೆಕಲ್ ಹೋಗುವ ರಸ್ತೆ ೨ತಿಂಗಳ ಹಿಂದೆ ಡಾಂಬರಿಕರಣ ಆಗಿದೆ ಆದರೆ ಈಗ ಅದೆಲ್ಲಾ ಕಿತ್ತಿಹೋಗುವ ಹಂತಕ್ಕೆ ಬಂದಿದೆ.
ಇದುವರಿಗೂ ಯಾವುದೇ ಗುತ್ತೇದಾರ ನಮ್ಮ ಊರಿಗೆ ಬಂದಿಲ್ಲ, ಸುವರ್ಣ ಗ್ರಾಮ ಯೋಜನೆಯಂತೂ ಸರಿಯಾಗಿ ಅಭಿವೃದ್ಧಿಯಾಗದೇ ಹಳ್ಳ ಹಿಡಿದು ವರ್ಷವೇ ಗತಿಸಿತು, ಯೋಜನೆಯಲ್ಲಿ ಮಂಜೂರಾದ ಆ ಹಣ ಎಲ್ಲಿಗೆ ಹೋಯ್ತು ಎನ್ನುವುದೇ ಅನುಮಾನವಾಗಿದೆ.
ಈಗ ಸದ್ಯಕ್ಕೆ ಗ್ರಾಮದಲ್ಲಿ ೧ಕೋಟಿ ೫೦ ಲಕ್ಷದಲ್ಲಿ ರಸ್ತೆ ಡಾಂಬರಿಕರಣ ಆಗ್ತಿದೆ ಅದು ಅವರಿಗೆ ತೋಚಿದ ಕಡೆಗೆ ಹಾಕುತ್ತಿದ್ದಾರೆ. ಸರಿಯಾಗಿ ಒಂದು ಕಡೆಯಿಂದ ಹಾಕುತ್ತಿಲ್ಲ. ಆ ರಸ್ತೆ ಮಾಡುವಾಗ ಒಂದು ಬೋರ್ಡ್ ಹಾಕಬೇಕು ಎನ್ನುವ ನಿಯಮ ಕೂಡ ಗುತ್ತೇದಾರರಿಗೆ ಗೊತ್ತಿಲ್ಲ.
ಸರಿಯಾಗಿ ರಸ್ತೆ ಸುಧಾರಣೆ ಆಗದಿದ್ದರೆ ದೂರು ನೀಡಲಾಗುವುದು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಲ್ಲಿಕಾರ್ಜುನ ಅವರು ಮನವಿ ಮಾಡಿಕೊಂಡರು.