ಸುಧಾಕರ್ ಹೇಳಿಕೆ: ನ್ಯಾಯಾಂಗ ತನಿಖೆಗೆ ಸಿದ್ದು ಆಗ್ರಹ

ಬೆಂಗಳೂರು, ಮಾ.24- ರಾಜ್ಯದ ಎಲ್ಲಾ ಶಾಸಕರು ಏಕ ಪತ್ನಿ ವ್ರತಸ್ಥರು,ಯಾರು ಯಾರಿಗೆ ವಿವಾಹೇತರ ಸಂಬಂಧ ಇದೆ ,ಯಾರಿಗೆ ಅನೈತಿಕ ಸಂಬಂಧವಿದೆ ಎನ್ನುವ ಕುರಿತು ಸಚಿವ ಡಾ.‌ಸುಧಾಕರ್ ಹೇಳಿಕೆ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರ ಸ್ವಾಮಿ, ಸಿದ್ದರಾಮಯ್ಯ,ಮಾಜಿ ಸಚಿವ ಡಿ.ಕೆ ಶಿವಕುಮಾರ್ ,ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ 225 ಶಾಸಕರ ತನಿಖೆಗೆ ಸುದಾಕರ್ ‌ಒತ್ತಾಯಿಸಿದ್ದಾರೆ. ಅವರನ್ನೂ ಸೇರಿದಂತೆ ನ್ಯಾಯಾಂಗ ತನಿಖೆ ನಡೆಸಿ ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಸಭೆ ಸ್ಪೀಕರ್ ಅವರಿಗೆ ಬರೆದಿರುವ ಕಾಂಗ್ರೆಸ್ ನ ಹಲವು ಶಾಸಕರು ಸಹಿ ಮಾಡಿರುವ‌ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸುಧಾಕರ್ ಸಚಿವರಾಗಿ ಸಚಿವರು, ಶಾಸಕರ ನೈತಿಕ ಪ್ರಶ್ನಿಸಿದ್ದಾರೆ.ಸದನ ನಡೆಯುತ್ತಿರುವಾಗ ಈ ರೀತಿಯ ಹೇಳಿಕೆ ಸದನದ ನಿಂದನೆಯಾಗಿದೆ.ಎಲ್ಲದಕ್ಕಿಂತ ಮಿಗಿಲಾಗಿ ಶಾಸಕರ ಕುಟುಂಬದ ಸದಸ್ಯರಲ್ಲಿ ಅನುಮಾನ ಮೂಡಲು ಅವಕಾಶ ಮಾಡಿಕೊಟ್ಟಿದೆ.ಸರ್ಕಾರ ಈ ವಿಷಯವನ್ನು ಗಂಬೀರವಾಗಿ ಪರಿಗಣಿಸಿ ಹೈಕೋರ್ಟ್ ನ್ಯಾಯಮೂರ್ತಿ ಗಳಿಂದ ತಕ್ಷಣವೇ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಮತ್ತು ಸಚಿವ ಸುಧಾಕರ್ ಸೇರಿದಂತೆ ನ್ಯಾಯಾಲಯದಿಂದ‌ ತಡೆಯಾಜ್ಞೆ ತಂದಿರುವ 6 ಸಚಿವರ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಗಳಿಂದ ಎಸ್ ಐಟಿ ತನಿಖೆ ನಡೆಸಲಿ ಎಂದಿದ್ದಾರೆ.

ತನಿಖೆ ಎದುರಿಸಲು ಸಿದ್ದ;

ಸಚಿವ ಸುಧಾಕರ್ ಹೇಳಿದಂತೆ ಸಿದ್ದರಾಮಯ್ಯ ,ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಕುಮಾರ್ ತನಿಖೆ ಎದುರಿಸಲು ಸಿದ್ದ ಎಂದಿದ್ದಾರೆ

ತನಿಖೆಗೆ ಸಿದ್ದರಾ?

225 ಶಾಸಕರ ಪೈಕಿ ಸಚಿವ ಸುಧಾಕರ್ ಒಬ್ಬರಾಗಿರುವ‌ ಹಿನ್ನೆಲೆಯಲ್ಲಿ ತನಿಖೆ ಎದುರಿಸಲು ನೀವು ಸಿದ್ದರಾಗಿದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶಾಸಕರ ನೈತಿಕ ವಿಷಯವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ತನಿಖೆಗೆ ಒಳಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.