ಸುಧಾಕರ್ ಹೇಳಿಕೆಗೆ ಬಿಜೆಪಿಯಲ್ಲೇ ಅಪಸ್ವರ

ಬೆಂಗಳೂರು, ಮಾ. ೨೪- ಎಲ್ಲರ ವಿರುದ್ಧ ತನಿಖೆಯಗಲಿ ಎಂದು ಆರೋಗ್ಯ ಸಚಿವ ಡಾ. ಸುದಾಕರ್ ನೀಡಿರುವ ಹೇಳಿಕೆಗೆ ಬಿಜೆಪಿಯಲ್ಲೇ ಅಪಸ್ವರ ಕೇಳಿ ಬಂದಿದೆ.
ಎಲ್ಲರ ತನಿಖೆ ನಡೆಸಿದರೆ, ಹುಚ್ಚರ ಕಥೆಯಾಗುತ್ತದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಬೇಸರವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ವರಿಗೆ ಮಾಡುವುದಕ್ಕೆ ಕೆಲಸವಿಲ್ಲ. ಸದನದಲ್ಲಿ ಚರ್ಚೆಯೂ ಮಾಡುವುದಿಲ್ಲ. ೨೨೪ ಸದಸ್ಯರ ಪೈಕಿ ಮಹಿಳಾ ಶಾಸಕಿಯರು ಇದ್ದಾರೆ. ಯಾರು ಶ್ರೀರಾಮಚಂದ್ರ ಮತ್ತು ಸೀತೆ ಎಂಬುದನ್ನು ಸಾಬೀತು ಮಾಡುವುದು ಬೇಕಿಲ್ಲ. ತಮ್ಮ ಆತ್ಮ ಮುಟ್ಟಿಕೊಂಡು ಹೇಳಲಿ. ಈಗ ಎಲ್ಲರ ತನಿಖೆ ಮಾಡಿದರೆ, ಹುಚ್ಚರ ಕಥೆಯಾಗುತ್ತದೆ ಎಂದು ಸುಧಾಕರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.
ಪ್ರತಿ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ಬಜೆಟ್‌ನಲ್ಲಿ ಕಲಾಪದಲ್ಲಿ ಭಾಗಿಯಾಗಲಿಲ್ಲ. ಆರೋಪ ಯಾರು ಮಾಡಿದ್ದಾರೆ. ಇವರು ಮಾಡುವ ಕುತಂತ್ರಕ್ಕೆ ಚಿಲ್ಲರೆ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಒಂದು ಬೆರಳು ಒಬ್ಬರನ್ನು ತೋರಿದರೆ ನಾಲ್ಕು ಬೆರಳು ಅವರನ್ನೇ ತೋರಲಿದೆ. ಮಾಜಿ ಸಚಿವ ಮೇಟಿ ಅವರ ಪ್ರಕರಣದಲ್ಲಿ ಹೆಣ್ಣು ಮಗಳು ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ. ಸಿದ್ದರಾಮಯ್ಯ ಅವರ ವಾಚ್ ಪ್ರಕರಣ ಏನೂ ಆಯಿತು ಎಂದು ಪ್ರಶ್ನಿಸಿದರು.