ಸುಧಾಕರ್ ಗೆಲವು-ಸಂಭ್ರಮಾಚರಣೆ

ವಿಜಯಪುರ,ಜೂ೬:ಪಟ್ಟಣದ ೧೪ ಮತ್ತು ೧೫ನೇ ವಾರ್ಡ್ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಾಲಯ ಆವರಣದ ಮುಂಭಾಗದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರುಗಳು ಸೇರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಕೆ.ಸುಧಾಕರ್ ಗೆಲುವಿನ ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ ಕಾರ್ಯಕರ್ತ ಚನ್ನಕೃಷ್ಣ ಮಾತನಾಡಿ ೨೦೨೪ ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷ್ರೇತ್ರದಿಂದ ಡಾ. ಸುಧಾಕರ್ ಅವರು ಎನ್ ಡಿ ಎ ಮೈತ್ರಿ ಕೂಟದ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದರು. ಇವರು ಒಂದು ಲಕ್ಷ ಮೂವತ್ತ ಮೂರು ಸಾವಿರ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಈ ಮೂಲಕ ನಮ್ಮ ರಾಷ್ಟ್ರದ ನಾಯಕ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಿದ್ದಾರೆ. ವಿಜಯಪುರ ಪಟ್ಟಣದ ೧೪ ನೇ ವಾರ್ಡಿನ ೧೧೫ ಮತ್ತು ೧೧೬ ನೇ ಬೂತಿನ ಕಾರ್ಯಕರ್ತರಾದ ನಮ್ಮೆಲ್ಲರಿಗೂ ಬಹಳ ಸಂತೋಷವಾಗಿದೆ. ಪಟಾಕಿ ಹೊಡೆಯುವ ಮೂಲಕ ನಮ್ಮ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಮೂರನೇ ಬಾರಿಗೆ ಮೋದಿಜಿ ಅವರು ಗೆಲ್ಲುತ್ತಿದ್ದು ರಾಷ್ಟ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ನಾವು ಮೋದಿಯವರನ್ನು ನಂಬಿ ಅವರನ್ನು ಗೆಲುವಿನ ಹಾದಿಯಲ್ಲಿ ನಡೆಸಿದ್ದೇವೆ. ಅವರು ಸಹ ರಾಷ್ಟ್ರದ ಜನತೆಗೆ ಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡುವರೆಂಬ ನಂಬಿಕೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆ.ಎಸ್.ರಾಮಚಂದ್ರಪ್ಪ, ಲಕ್ಷ್ಮೀನಾರಾಯಣ, ವಿ.ಎನ್.ಪ್ರಕಾಶ್, ಜೆ.ಆರ್.ಮಂಜುನಾಥ್, ಜೆ.ಎಂ.ಶ್ರೀನಿವಾಸ್, ಡಿ.ಎಂ. ಮುಕುಂದ, ಎನ್.ಮಂಜುನಾಥ್, ಭಾಸ್ಕರ್ ಬಾಬು, ಮುನಿಕೃಷ್ಣ ಮತ್ತಿತರರು ಇದ್ದರು.