
ಚಿಕ್ಕಬಳ್ಳಾಪುರ, ಏ.೨೭- ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿ ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿ ನಂತರ ಸ್ವಾರ್ಥಕ್ಕಾಗಿ ಬಿಜೆಪಿಗೆ ಸೇರಿದ ಡಾ.ಕೆ.ಸುಧಾಕರ್‌ಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಕ್ಷೇತ್ರದಲ್ಲಿ ದುರಂಕಾರದ ಪರಮಾಧಿಕಾರ ಮಿತಿ ಮೀರಿದ್ದು ರಾಜ್ಯದ ಉದ್ದಗಲಕ್ಕೂ ಭ್ರಷ್ಟಾಚಾರದ ಪರಮಾವಧಿ ಇದೆ ಎಂದು ಮಾಜಿ ಸಚಿವ ಎಂ.ಆರ್.ಸೀತರಾಮ್ ಆರೋಪಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೇವಲ ಪ್ರಭಾವಿಗಳಿಗೆ ಮಾತ್ರ ಅನುಕೂಲ ಸಿಕ್ಕಿದೆ. ಕಾಲಚಕ್ರ ಬದಲಾಗುತ್ತಿರುತ್ತದೆ, ಚುನಾವಣೆಯ ನಂತರ ಸುಧಾಕರ್ ಎಲ್ಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್‌ಗೆ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಸರಕಾರದ ಮೇಲಿನ ಆಕ್ರೋಶವನ್ನು ಜನ ಹೊರ ಹಾಕುತ್ತಿದ್ದಾರೆ. ಇಲ್ಲಿನ ಜಾತಿಗಳನ್ನು ಹೊಡೆದು ಅಳುವ ಕೆಲಸ ಮೀತಿ ಮಿರಿದೆ. ಜನಪ್ರತಿನಿಧಿ ನಯ, ವಿನಯದಿಂದ ನಡೆದುಕೊಂಡಾಗ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಹೇಳಿದರು.
ಸುಧಾಕರ್ ರಾಜಕಾರಣದಲ್ಲಿ ನೆನ್ನೆ ಮೊನ್ನೆ ಕಣ್ಣು ಬಿಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ೫೦ ವರ್ಷಗಳಿಂದ ರಾಜಕೀಯದಲ್ಲಿ ಇದ್ದಾರೆ. ಅವರ ಬಗ್ಗೆ ಟೀಕೆ ಮಾಡ್ತಾರೆ. ಬಿಜೆಪಿ ಸೇರಿ ಮೂರು ವರ್ಷಗಳು ಕಳೆದಿದೆ. ರಾಜಕಾರಣದಲ್ಲಿ ದೊಡ್ಡ ರಾಜಕಾರಣಿಯೇನಲ್ಲ. ಸಣ್ಣ ಮಟ್ಟದಲ್ಲೇ ದೊಡ್ಡ ಮಟ್ಟದ ರೀತಿ ಮಾತನಾಡಿದರೆ ಏನು ಕಥೆ…?. ಜನರು ಜನಪ್ರತಿನಿಧಿಯಾಗಿ ಒಪ್ಪಿಕೊಳ್ಳಲು ಸಾಧ್ಯನ, ಹಿರಿಯರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದರು.