ಸುದ್ದಿಗೋಷ್ಟಿಯಿಂದ ಪತ್ರಕರ್ತರನ್ನು ಹೊರ ಕಳುಹಿಸಿದ ಶಾಸಕ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಮೇ 08 : ನಗರದ ದಿನ‌ಪತ್ರಿಕೆಯ ಇಬ್ಬರು ಪತ್ರಕರ್ತರನ್ನು ಸುದ್ದಿಗೋಷ್ಟೀಯಿಂದ ಹೊರಹೋಗುವಂತೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದು ಬಳ್ಳಾರಿಯ ಮಾಧ್ಯಮ ಇತಿಹಾಸದಲ್ಲಿ ಹೊಸದೊಂದು ಬೆಳವಣಿಗೆ ನಡೆಯಿತು.
ಇಲ್ಲಿನ ವಾಲ್ಮೀಕಿ ಸರ್ಕಲ್ ನಲ್ಲಿರುವ ನಗರ  ಬಿಜೆಪಿ ಕಚೇರಿಯಲ್ಲಿ ಶಾಸಕರು ಸುದ್ದಿಗೋಷ್ಟಿ ಕರೆದಿದ್ದರು. ಪಕ್ಷದ ಮಾಧ್ಯಮ ಸಂಚಾಲಕರಿಂದ ಮಾಹಿತಿ ನೀಡಲಾಗಿತ್ತು.
ಸುದ್ದಿಗೋಷ್ಟಿ ಆರಂಭವಾಗುತ್ತಿದ್ದಂತೆ ಟೈಮ್ಸ್ ಆಫ್ ಕರ್ನಾಟಕದ ವಾರದಿಗಾರ  ಕೆ.ಬಜಾರಪ್ಪ ಅವರಿಗೆ ನೀವು ಪ್ರೇಸ್ ಮೀಟ್ ನಲ್ಲಿ ಇರುವುದು ಬೇಡ ಹೊರ ಹೋಗಿ ಎಂದು. ಹಿಗೇಕೆ ಎಂಬ ಪ್ರಶ್ನೆಗೆ ಅವರು ಒಂದು ಪಕ್ಷದ ಕಾರ್ಯಕರ್ತರಂತೆ  ಕೆಲಸ ಮಾಡುವುದರಿಂದ ಎಂದರು.
‌ನಂತರ ಜಾಗೃತಿ‌ ಕಿರಣ ಮತ್ತು ಗಣಿನಾಡು ಪತ್ರಿಕೆಯ ಸಂಪಾದಕ‌ ಯಾಳ್ಪಿ ವಲಿಬಾಷ ಅವರನ್ನು ನೀವು ಸಹ ಹೊರ ಹೋಗಿ ಎಂದರು ಶಾಸಕರು. ಸುದ್ದಿಗೋಷ್ಟಿಗೆ ಬನ್ನಿ ಎಂದು ನಿಮ್ಮವರೇ ಮೆಸೇಜ್ ಹಾಕಿದ್ದಾರೆಂದು ಅವರು ಕೇಳಿದಾಗ. ತಪ್ಪಾಗಿದೆ ಇನ್ನುಮುಂದೆ ಹಾಕಲ್ಲ ಬರಬೇಡಿ ಎಂದರು. ಆಯ್ತು ಬಿಡಿ ನಿಮ್ಮ ಅವಶ್ಯಕತೆ ನಮಗೇನಿಲ್ಲ ಎಂದು ಹೊರ ಹೋದರು.
ಯಾಕೆ ಹೀಗೆ ಮಾಡಿದಿರಿ ಎಂಬ ಪತ್ರಕರ್ತರ ಪ್ರಶ್ನೆಗೆ
ಅವರು  ಕೇವಲ‌ ನಮ್ಮ ಬಗ್ಗೆ ನೆಗಿಟಿವ್ ಬರೆಯುತ್ತಾರೆ.  ವಾಸ್ತವಾಂಶದ ಬರೆಯಲ್ಲ ಅಂತಹ ವರದಿಗಾರರು ಬೇಕಿಲ್ಲ ಎಂದು ಹೇಳಿದರು.
 ಯಾವ ದಿನವೂ ಮಾಧ್ಯಮಗಳ ಬಗ್ಗೆ ಈ  ರೀತಿ ನಡೆದುಕೊಂಡಿರಲಿಲ್ಲ. ಸುದ್ದಿಗೋಷ್ಟಿಯ ಕೊನೆಯಲ್ಲಿ ಮತ್ತೊಬ್ಬರಿಗೆ ನಿಮ್ಮಂತವರೇ ಸುಳ್ಳು ಸುದ್ದಿ ಹಬ್ಬಿಸುತ್ತೀರಿ ಎಂದಿದ್ದು ಸಹ ಇಂದಿನ ಸುದ್ದಿಗೋಷ್ಟಿಯಲ್ಲಿ ಗಮನ ಸೆಳೆಯಿತು.
   
@12bc = ಚುನಾವಣಾ ಸಿಬ್ಬಂದಿ ಕಿರಿ ಕಿರಿ:
ನಗರದ ಬಳ್ಳಾರಿ ಪತ್ರಕರ್ತರ ಒಕ್ಕೂಟದಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಕರೆದಿದ್ದ ಸುದ್ದಿಗೋಷ್ಟಿಗೆ ಚುನಾವಣಾ ಸಿಬ್ಬಂದಿ ಬಂದು ಕೂತಿದ್ದರು.
ನೀವೇಕೆ ಇಲ್ಲಿ ಎಂದು ಪತ್ರಕರ್ತರು ಕೇಳಿದ್ದಕ್ಕೆ ಆರ್ ಓ ಹೇಳಿದ್ದಾರೆಂದರು.  ಸುದ್ದಿಗೋಷ್ಟಿಗೆ ನೀವು ಬರಬೇಡಿ ಎಂದಿದ್ದಕ್ಕೆ ಕಿರಿ ಕಿರಿ ಮಾಡಿದರು. ಹೊರ ಹೋಗಿ ಮತ್ತೆ ಬಂದರು. ಪತ್ರಕರ್ತರೆಲ್ಲ ಸೇರಿ ಗಲಾಟೆ ಮಾಡಿ ಹೊರಗಡೆ ಮನೆ ಮನೆಗೆ ಹಣ ಹಂಚುತ್ತಿದ್ದಾರೆ ಅದನ್ನು ತಡೆಯುವುದು ಬಿಟ್ಟು ಇಲ್ಲಿಗೇಕೆ ಬಂದೀರಿ ಎಂಬ ಪ್ರಶ್ನೆ ಎದುರಾದಾಗ ಅವರು ಹೊರ ನಡೆದರು. ಹೀಗೆಕೆ ಮಾಡ್ತೀರಿ ಎಂದು ಕೇಳಿದರೆ. ಡಿಸಿಯವರಿಗೆ ನಿಮ್ಮ ಪತ್ರಕರ್ತರೇ ಅನಿಲ್ ಲಾಡ್ ಅವರು ಮಾಧ್ಯಮದವರಿಗೆ ಹಣ ಹಂಚ್ತಾರೆ ಹೋಗಿ ಎಂದು ಹೇಳಿದ್ದಕ್ಕೆ ಬಂದಿತ್ತು ಎಂದು ಹೇಳಿದ್ದು ಸೋಜಿಗವೆನಿಸಿತು.