ಸುದೀರ್ಘ ಸೇವೆ ಸಲ್ಲಿಸಿದ ಪುಟ್ಟಪ್ಪಗೆ ಸನ್ಮಾನ

ಸಂಜೆವಾಣಿ ವಾರ್ತೆ
ಹನೂರು ಮೇ 7 :- ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ ಇದೇ ತಿಂಗಳು 10 ನೇ ತಾರೀಖು ನಿವೃತ್ತಿ ಹೊಂದುತ್ತಿರುವ ಉಪ ಪಾರುಪ ತ್ತೆಗಾರ ಪುಟ್ಟಪ್ಪರವರನ್ನು ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಎಣ್ಣಿ ಮಜ್ಜನ ಸೇವಾಕರ್ತರಾದ ಅಯ್ಯನಸರಗೂರು ಮಠದ ಮೂಗಪ್ಪ ರಾಮವ್ವ ವಂಶಸ್ಥರು ಸನ್ಮಾನಿಸಿ ಗೌರವಿಸಲಾಯಿತು, ಈ ಸಂದರ್ಭದಲ್ಲಿ ಹಲವು ಭಕ್ತರಾದ ರಾಮಸ್ವಾಮಿ, ಮಹಾದೇವ ಶೆಟ್ಟಿ, ನಾಗರಾಜ, ಚೇತನ್ ಹಾಜರಿದ್ದರು
ಶ್ರೀ ಮಲೆ ವಯೋನಿವೃತ್ತಿ ಯನ್ನು ಹೊಂದಿರುತ್ತಾರೆ, ಶ್ರೀಯುತರು ನಮ್ಮ ಸಹಕಾರಿಯ ಸದಸ್ಯರಾಗಿರು ತ್ತಾರೆ, ನಿವೃತ್ತರ ಭವಿಷ್ಯದ ಜೀವನ ಭವ್ಯವಾಗಿ, ಸುಖಕರವಾಗಿರಲಿ ಎಂದು ನಮ್ಮ ಸಹಕಾರಿಯ ಪರವಾಗಿ ವೈಯಕ್ತಿಕವಾಗಿ ಮಹದೇಶ್ವರ ಸ್ವಾಮಿ ದೇವಾಲಯದ ನೌಕರರು ಅಭಿನಂದನೆಗಳನ್ನು ಸಲ್ಲಿಸಿದ್ದರು.