ಸುದೀರ್ಘಾವಧಿ ಬಳಿಕ ಕಾಲೇಜು ಪ್ರಾರಂಭ

ಕಲಬುರಗಿ ನ. 17: ಏಳು ತಿಂಗಳ ಸುದೀರ್ಘ ಅವಧಿಯ ನಂತರ ಯುಜಿಸಿ ಮಾರ್ಗಸೂಚಿಗಳ ಅನ್ವಯ ಕೊರೋನಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪದವಿ ಡಿಪೆÇ್ಲಮಾ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಇಂದಿನಿಂದ ಆರಂಭವಾಗಿವೆ.
ಕೊರೊನಾ ಸೋಂಕಿನ ಭಯ, ಆತಂಕ ಮತ್ತು ವಿರೋಧದ ನಡುವೆಯೂ ಇಂದಿನಿಂದ ಕಾಲೇಜುಗಳು ಬಾಗಿಲು ತೆರೆದಿವೆ.
ನಗರದ ಪಿಡಿಎ ಇಂಜನಿಯರಿಂಗ್ ಕಾಲೇಜು ಸೇರಿದಂತೆ ಇನ್ನಿತರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕ್ಲಾಸಿಗೆ ಹಾಜರಾದರು. ಏಳು ತಿಂಗಳ ಬಳಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲರವ ಕಂಡುಬರುತ್ತಿದೆ. ಆದರೆ ಕೊರೋನಾ ಮುಂಚಿನ ಖುಷಿಯ ವಾತಾವರಣ ಕಂಡುಬಂದಿಲ್ಲ.ಇದು ಮೊದಲ ದಿನವಾದ್ದರಿಂದ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಿ ವಿರಳವಾಗಿತ್ತು.
ಕೊರೊನಾ ಮಾರ್ಗಸೂಚಿ ಅನ್ವಯ ನಗರದ ಪಿಡಿಎ ಇಂಜನೀಯರ್ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸಿಬ್ಬಂದಿಗಳು ತಾಪಮಾನ ಪರೀಕ್ಷಿಸಿ ಸ್ಯಾನಿಟೈಜರ್ ನೀಡಿದರು.
ಕಾಲೇಜುಗಳಲ್ಲಿ ಪ್ರತಿ ಬೆಂಚ್ ನಡುವೆ 6 ಅಡಿ ಅಂತರದಲ್ಲಿ ಮಾರ್ಕ್ ಗಳನ್ನು ಮಾಡಲಾಗಿದೆ. ಕಾಲೇಜು ಆವರಣ, ತರಗತಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಈಗಾಗಲೇ ಕಾಲೇಜಿನ ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಗೆ ಸೂಚಿಸಲಾಗಿದೆ.ಕಾಲೇಜಿಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಟೆಂಪರೇಚರ್ ಚೆಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ ಕಡ್ಡಾಯ , 3 ದಿನ ಮುಂಚೆಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. 6 ಅಡಿ ಸಾಮಾಜಿಕ ಅಂತರ ಪಾಲಿಸಬೇಕು. ಶುದ್ದ ಕುಡಿಯುವ ನೀರು ನೀಡಬೇಕು.ಕಾಲೇಜು ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.ಖಾಸಗಿ ವಾಹನ ಕಾಲೇಜು ಬಸ್ ಗಳನ್ನು ಸತತವಾಗಿ ಸ್ಯಾನಿಟೈಸ್ ಮಾಡಬೇಕು.ವಿದ್ಯಾರ್ಥಿಗಳು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಇನ್ ಸ್ಟಾಲ್ ಮಾಡಿಕೊಂಡಿರಬೇಕು.ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿ, ಅಧ್ಯಾಪಕರು 14 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.