ಸುದೀಪ್ ಬಿಜೆಪಿಗೆ ಸುದ್ದಿ ಸುಳ್ಳು

ಬೆಂಗಳೂರು, ಏ. ೬- “ನಮ್ಮ ಕಿಚ್ಚ ಸುದೀಪ್ ತಮ್ಮನ್ನು ಮಾರಿಕೊಳ್ಳುವವರಲ್ಲ..”
ಕಿಚ್ಚ ಸುದೀಪ್ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಅವರ ವಿಶ್ವಾಸದ ನುಡಿ ಇದು.ಈ ಸಂಬಂದ ಟ್ವೀಟ್ ಮಾಡಿರುವ ಪ್ರಕಾಶ್ ರೈ ಅವರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಇದು ಎಂದು ಹೇಳಿದ್ದಾರೆ.
ಸುದೀಪ್ ಬಿಜೆಪಿ ಸೇರಲಿದ್ದಾರೆ ಎನ್ನುವುದು ಊಹಾಪೋಹದ ವಿಷಯ ಎಂದು ನಾನು ನಂಬುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಪರ ವಿರೋಧ:
ನಟ ಪ್ರಕಾಶ್ ರೈ ಅವರ ಟ್ವೀಟ್ ಗೆ ಸಾಮಾಜಿಕ ಜಾಲ ತಾಣದಲ್ಲಿ ಪರ ವಿರೋಧದ ಅಭಿಪ್ರಾಯವೂ ಕೂಡ ವ್ಯಕ್ತವಾಗಿದೆ.
ಕೆಲವರು ಪ್ರಕಾಶ್ ರೈ ವಿರುದ್ಧವೂ ಹರಿಹಾಯ್ದಿದ್ದಾರೆ.