
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.22: ಬಿಜೆಪಿ ಪರವಾಗಿ ಮತ ಪ್ರಚಾರಕ್ಕೆ ಚಿತ್ರ ನಟ ಸುದೀಪ್ ಆದ್ರೂ ಬರಲಿ, ಪ್ರದೀಪ್ ಆದ್ರೂ ಬರಲಿ. ನನಗೇನು ಅಳಕಿಲ್ಲ ಕಳೆದ ಭಾರಿ ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸುದೀಪ್ ಪ್ರಚಾರ ಮಾಡಿದ್ರು. ಆದರೂ ಜನರು ನನ್ನ ಗೆಲ್ಲಿಸಿದ್ದಾರೆಂದು ಗ್ರಾಮೀಣ ಶಾಸಕ ನಾಗೇಂದ್ರ ಹೇಳಿದ್ದಾರೆ.
ಅವರು ಇಂದು ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಸುದ್ದಿಗರರೊಂದಿಗೆ ಮಾತನಾಡಿದರು. ಸ್ಟಾರ್ ಪ್ರಚಾರಕರು ಅಂತಾ ಸಿನಿಮಾ ನಾಯಕರು ಯಾರು ಕಾಂಗ್ರೆಸ್ ನಲ್ಲಿ ಇಲ್ಲ ಎಂದರು.
ದೇಶ ಹಾಗೂ ರಾಜ್ಯದಲ್ಲಿ ರಂಜಾನ್ ಹಬ್ಬ ವಿಶೇಷವಾಗಿ ನಡೆಯುತ್ತಿದೆ. ನಮ್ಮಲ್ಲಿ ಹಿಂದು ಮತ್ತು ಮುಸ್ಲಿಂ ಬಾಂಧವರು ಒಂದಾಗಿ ಹಬ್ಬವನ್ನ ಆಚರಣೆ ಮಾಡ್ತಾರೆ.
ನಮ್ಮಗೆಲ್ಲರಿಗೂ ಶಾಂತಿ. ನೆಮ್ಮದಿ. ಸುಖ. ಮಳೆ ಬೆಳೆಯನ್ನ ಅಲ್ಲಾ ಕರುಣಿಸಲಿ. ಬಳ್ಳಾರಿಯಲ್ಲಿ ಮುಸ್ಲಿಂ ಬಾಂಧವರ ಜೊತೆ ಹಿಂದುಗಳು ಉತ್ತಮ ಒಡನಾಟ ಹೊಂದಿದ್ದಾರೆ. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸ್ಪಂದಿಸುತ್ತಾರೆ. ಯಾವುದೇ ರಾಜಕೀಯ ಷಂಡ್ಯಂತ್ರ ಬಳ್ಳಾರಿಗೆ ಬಾರದಿರಲಿ ಎಂದರು.
ಮತದಾನಕ್ಕೆ ಕೆಲವು ದಿನಗಳು ಮಾತ್ರ ಬಾಕಿಯಿದೆ. ಕಾಂಗ್ರೆಸ್ ಪರವಾಗಿ ಜನರು ಇದ್ದಾರೆ ನಮ್ಮಗೆ ಇದು ಮಾಡು ಇಲ್ಲವೇ ಮಡಿ ಎನ್ನುವಂತಹ ಚುನಾವಣೆಯಾಗಿದೆಂದರು.
ಬಳ್ಳಾರಿ ಜಿಲ್ಲೆಯಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ.ಬಿಜೆಪಿಯವರು ಹಣ ಬಲದಿಂದ ಚುನಾವಣೆ ಎದುರಿಸುತ್ತಿದ್ದಾರೆ. ಈ ಚುನಾವಣೆ ಹಣ ಬಲ- ಜನ ಬಲದ ಮೇಲೆ ನಡೆಯುತ್ತಿದೆ. ಧರ್ಮ- ಅಧರ್ಮದ ಚುನಾವಣೆಯಾಗಿದೆ. ಕೊನೆಗೆ ಧರ್ಮವೇ ಗೆಲ್ಲುತ್ತದೆ ಎಂದ ಅವರು. ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮಗಳು ಬಡವರಿಗೆ ನೆರವಾಗಲಿದೆಂದರು.
ಬಿಜೆಪಿಯವರದ್ದು ಹರಾಮಿ ದುಡ್ಡು. ಅವರ ದುಡ್ಡನ್ನ ಯಾರು ಮುಟ್ಟಲ್ಲ.ಬಿಜೆಪಿ ಹಣಬಲ ತೋಳ್ಬಲದ ಮೇಲೆ ಬರುತ್ತಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಯಾರು ಹಣಕ್ಕೆ ಮಾರು ಹೋಗಲ್ಲ. ಅವರ ದುಡ್ಡು ಚುನಾವಣೆಯಲ್ಲಿ ಪ್ರಭಾವ ಬೀರಲ್ಲ. ಬಿಜೆಪಿಯ ನೋಟು. ಕಾಂಗ್ರೆಸ್ ಗೆ ವೋಟ್ ಅಂತಾ ಜನರು ಮಾತನಾಡುತ್ತಿದ್ದಾರೆಂದರು.