ಸುತ್ತೂರು ಮಠ ಇತರೇ ಮಠಗಳಿಗೆ ಮಾದರಿ : ಬಿ.ಎಸ್.ವೈ

ಮೈಸೂರು: ಜ.11: ಸುತ್ತೂರು ಶ್ರೀಕ್ಷೇತ್ರದಲ್ಲಿ ಸುತ್ತೂರು ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1061 ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ದೀಪಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1061 ನೇ ಯ ಜಯಂತಿಯಲ್ಲಿ ಭಾಗಿಯಾಗಿ ಬಹಳ ಸಂತೋಷದಿಂದ ಪಂಚಾಂಗ, ಕೃತಿ ಬಿಡುಗಡೆ ಮಾಡಿದ್ದೇನೆ. ಶಿವರಾತ್ರೀಶ್ವರರು 10 ಶತಮಾನಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಸುತ್ತೂರಿನ ಕಪಿಲೆ ನದಿ ದಡದಲ್ಲಿ ಮಠ ಸ್ಥಾಪಿಸಿದರು.ಈ ಸಂಸ್ಥಾನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ.ಈ ವಿದ್ಯಾಸಂಸ್ಥೆಯಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡಿದ್ದಾರೆ.


ಕೋವಿಡ್ 19 ಇರುವುದರಿಂದ ಸುತ್ತೂರಿನಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದ ಮಠದ ಅಭಿವೃದ್ಧಿಗೆ ಸರ್ಕಾರ ಬೆಂಬಲವಾಗಿ ಇರುತ್ತದೆ ಎಂದರು ಶ್ರೀಮಠವು ಜಾತಿ-ಮತ ವಿಲ್ಲದೆ ಪ್ರತಿಯೊಬ್ಬರಿಗೂ ಅನ್ನದಾಸೋಹ ಶಿಕ್ಷಣ ನೀಡುತ್ತಿದೆ ಕೋರೋಣ 19 ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಶ್ರೀಮಠವು ಸಮಾಜಸೇವೆಯಲ್ಲಿ ಸ್ಪಂದಿಸುತ್ತಿದೆ ಪ್ರತಿದಿನ ಪ್ರತಿಕ್ಷಣ ಎಲ್ಲರಿಗೂ ಸ್ಪಂದಿಸಿ ದಿನಿಸಿ ಕಿಟ್ ನೀಡಿ ಸಹಕಾರ ನೀಡಿತು ಎಂದು ಸ್ಮರಿಸಿಕೊಂಡರು. ಈ ಮಠ ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಚಾಪು ಮೂಡಿಸಿದೆ. ಇವರ ಕೊಡುಗೆ ಅಪಾರ. ಸುತ್ತೂರು ಮಠ ಇತರೇ ಮಠಗಳಿಗೆ ಮಾದರಿ. ಮಠದ ಚಟುವಟಿಕೆಗಳಿಗೆ ಸರ್ಕಾರ ಸಹಕರಿಸಲಿದೆ ಎಂದರು.
ಇದೇ ಸಂಧರ್ಭದಲ್ಲಿ ಜ್ಯೋತಿಷ ಮಹಾಮಹೋಪಾಧ್ಯಾಯ ಸಿದ್ಧಾಂತಿ ಡಾ .ಕೆ.ಜಿ. ಪುಟ್ಟಹೊನ್ನಯ್ಯ, ಎಸ್.ಎನ್. ಸಿಂಪಿಗೇರ ರವರು ರಚಿಸಿರುವ ಪಂಚಾಂಗ ಹಾಗೂ ಕೃತಿಯನ್ನು ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕನಕಪುರ ಶ್ರೀಗಳು ಕನಕಪುರ ಶ್ರೀಗಳು ಕನಕಪುರ ಶ್ರೀಗಳು ವಾಟಾಳ್, ಮೈಸೂರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ , ಸಚಿವ ನಾರಾಯಣ ಗೌಡ , ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಎನ್.ಮಹೇಶ್, ನಿರಂಜನ್ ಕುಮಾರ್, ಎಂ.ಎಲ್.ಸಿ.ಎ.ಹೆಚ್.ವಿಶ್ವನಾಥ್, ನಿಗಮ ಮಂಡಳಿಯ ಅಧ್ಯಕ್ಷರಾದ ಎಸ್ ಮಾದೇವಯ್ಯ, ಕೃಷ್ಣಪ್ಪಗೌಡ, ರಘು, ವಿಜಯ್ ಶಂಕರ್ ಸೇರಿದಂತೆ ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು.