ಸುತ್ತೂರು ಮಠಕ್ಕೆ ಸದ್ಗುರು ಜಗ್ಗಿ ವಾಸುದೇವ್ ಭೇಟಿ

ಮೈಸೂರು,ಮಾ.25:-ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ದ ಈಶಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸದ್ಗುರು ಜಗ್ಗಿ ವಾಸುದೇವ್ ಅವರಿಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಮ್ಮದೊಂದು ಪ್ರಾಜೆಕ್ಟ್ ಚಿಕ್ಕಬಳ್ಳಾಪುರದಲ್ಲಿ ಬರುತ್ತಿದೆ. ನೋಡಿ ಹೋಗೋಣ ಅಂತ ಬಂದೆ. ಬಂದು ಒಂದು ವರ್ಷದ ಮೇಲಾಯ್ತು. ಕೊರೋನಾ ವೈರಸ್ ಇದ್ದಿದ್ದರಿಂದ ಬರೋದಕ್ಕಾಗಿರಲಿಲ್ಲ ಎಂದರು. ಕೊಯಮತ್ತೂರಿನಿಂದ ಬೈಕ್ ನಲ್ಲೇ ಬಂದಿದ್ದ ಎಂದಿದ್ದಕ್ಕೆ ಹೌದು ಬೈಕಿನಲ್ಲೇ ಬಂದಿದ್ದು, ಸೋಶಿಯಲ್ ಡಿಸ್ಟೆನ್ಸಿಂಗ್ ಎಂದು ಹಾಸ್ಯಚಟಾಕಿ ಹಾರಿಸಿದರು.
ಕೊರೋನಾ ವೈರಸ್ ಇದ್ದರೂ ಕೂಡ ಕಾವೇರಿ ಕೂಗು ದ್ವಿಗುಣವಾಗಿದೆ. ರೈತರು ಬಹಳ ಉತ್ಸಾಹದಿಂದ ಭಾಗವಹಿಸಿ ಒಂದು ಕೋಟಿ ಹತ್ತು ಲಕ್ಷ ಸಸಿಗಳನ್ನು ಜಮೀನಿನಲ್ಲಿ ಇಟ್ಟಿದ್ದಾರೆ. ಮೂರುವರೆ ಕೋಟಿ ಸಸಿಗಳನ್ನು ಇಡಲು ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. 44ಸಾವಿರ ದೇವಸ್ಥಾನಗಳಲ್ಲಿ 12ಸಾವಿರ ದೇವಸ್ಥಾನಗಳಲ್ಲಿ ಒಂದು ಪೂಜೆ ಕೂಡ ನಡೆಯಲಿಲ್ಲವೆಂದು ತಮಿಳ್ನಾಡು ಸರ್ಕಾರವೇ ಹೈಕೋರ್ಟ್ ನಲ್ಲಿ ಹೇಳಿದೆ. 37ಸಾವಿರ ದೇವಸ್ಥಾನಗಳಲ್ಲಿ ಒಬ್ಬರೇ ಒಬ್ಬರಿದ್ದಾರೆ. ಅವರೇ ಪೂಜೆ ಮಾಡೋದು, ಅವರೇ ಮೇಲುಸ್ತುವಾರಿ, ಅವರೇ ನೋಡಿಕೊಳ್ಳೋದು, ಅವರೇ ಹೈಕೋರ್ಟ್ ನಲ್ಲಿ ಹೇಳಿರೋದು 1200ಮೂರ್ತಿಗಳನ್ನು ಯಾರೋ ತಗೊಂಡು ಹೋಗಿ ಬಿಟ್ಟಿದ್ದಾರೆ. ಯಾರೋ ಒಬ್ಬರು ನಿವೃತ್ತ ಪೆÇಲೀಸ್ ಅಧಿಕಾರಿ ಪುಸ್ತಕ ಬರೆದಿದ್ದಾರೆ. ಅವರು ಹೇಳುತ್ತಾರೆ ಸುಮಾರು 9ಸಾವಿರ ಮೂರ್ತಿಗಳು ಕಳುವಾಗಿದೆ. ಸಾವಿರ ವರ್ಷ, 700 ವರ್ಷದ ದೇವಾಲಯಗಳಲ್ಲಿ ಶಿಲೆಗಳಲ್ಲ, ಮೂರ್ತಿಗಳೇ ಇಲ್ಲ, ಸರ್ಕಾರ ಇದೇ ರೀತಿ ನಡೆಸಿದರೆ ಇನ್ನು ಐವತ್ತು ವರ್ಷಗಳಲ್ಲಿ ದೇವಾಲಯಗಳೇ ಇರಲ್ಲ. ಭಕ್ತಿ ಇಲ್ಲದೆ ದೇವಸ್ಥಾನ ಹೇಗೆ ಇನ್ ವಾಲ್ವಮೆಂಟ್ ಇಲ್ಲ, ಬಿಸಿನೆಸ್ ನಡೆಸಿದ ಹಾಗೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.