ಸುತ್ತೂರಿನಲ್ಲಿ ಅದ್ದೂರಿಯಾಗಿ ನಡೆದ ಸಾಮೂಹಿಕ ವಿವಾಹ

ಸಂಜೆವಾಣಿ ವಾರ್ತೆ
ನಂಜನಗೂಡು: ಫೆ.07:- ಶ್ರೀ ಕ್ಷೇತ್ರ ಸುತ್ತೂರು ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಸುತ್ತೂರು ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ವಿವಾಹ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ 120 ನವ ಜೋಡಿಗಳು ಸತಿಪತಿಗಳಾದರು.
120 ಜೋಡಿಗಳಲ್ಲಿ ವೀರಶೈವ ಲಿಂಗಾಯತ 4 ಜೋಡಿಗಳು ಪರಿಶಿಷ್ಟ ಜಾತಿ 61 ಜೋಡಿಗಳು ಪರಿಶಿಷ್ಟ ಪಂಗಡ 26 ಜೋಡಿಗಳು ಹಿಂದುಳಿದ ವರ್ಗ 18 ಜೋಡಿಗಳು ಅಂತರ್ಜಾತಿ ವಿವಾಹ 11 ಜೋಡಿಗಳು 120 ರಲ್ಲಿ ವಿಶೇಷ ಜೋಡಿಗಳು ತಮಿಳುನಾಡಿನ ಜೋಡಿಗಳು 23 ವಿಶೇಷ ಚೇತನರು 4 ಮರುಮದುವೆ 1 ಒಟ್ಟು 120 ಜೋಡಿಗಳು ಇಂದು ಸುತ್ತೂರಿನಲ್ಲಿ ಸತಿಪತಿಗಳಾಗಿ ಹೊಸ ಜೀವನಕ್ಕೆ ಕಾಲಿಟ್ಟರು. ಸತಿಪತಿಗಳಿಗೆ ಈ ಸಂದರ್ಭದಲ್ಲಿ ವರನಿಗೆ ಪಂಚೆ ಸಾರ್ಟು ವಲ್ಲಿ ಹಾಗೂ ವಧುವಿಗೆ ಸೀರೆ ರವಿಕೆ ಮಾಂಗಲ್ಯ ಕಾಲುಂಗುರಗಳನ್ನು ನೀಡಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಬಹಳ ಅದ್ದೂರಿಯಿಂದ ಜಾತ್ರಾ ಮಹೋತ್ಸವ ನಡೆಯುತ್ತಿದೆ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಂಡು ಮತ್ತು ನವಜೋಡಿಗಳಿಗೆ ಅವರ ಕುಟುಂಬಸ್ಥರು ಸಂಬಂಧಿಕರು ಹಿತೈಷಿಗಳು ಸ್ನೇಹಿತರು ನವ ಜೋಡಿಗಳಿಗೆ ಶುಭ ಹಾರೈಸಿದರು ನವ ಜೋಡಿಗಳಿಗೆ ಮತ್ತು ಕುಟುಂಬಸ್ಥರಿಗೆ ವಿಶೇಷವಾಗಿ ದಾಸೋಹ ಮಾಡಲಾಗಿತ್ತು.