ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ ರೋಗ ರುಜಿನಗಳು ಬರುವುದಿಲ್ಲ : ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ, ಆ. 31- ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಬಿಸಿಯಾದ ಆಹಾರ ಪಧಾರ್ಥಗಳನ್ನು ಸೇವನೆ ಮಾಡಿದರೆ, ಕೋರೋನಾ ವೈರಾಸ್‍ನಂತಹ ರೋಗ ರುಜಿನಗಳು ಹತ್ತಿರಕ್ಕೆ ಸುಳಿಯುವುದಿಲ್ಲ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಸಿಸಿ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮದಡಿಯಲ್ಲಿ ಕೋರೋನ್ ವೈರಸ್ ಪರೀಕ್ಷೆ ಮಾಡುವ ಕಾರ್ಯಾಗಾರಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರು ಕೋರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದಾರೆ. ಆಯಾ ಜಿಲ್ಲಾ, ತಾಲೂಕು, ಬ್ಲಾಕ್ ಹಾಗು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೋರೋನಾ ವಾರಿರ್ಯಸ್‍ಗಳನ್ನು ನೇಮಕ ಮಾಡಲಾಗಿದೆ. ಅವರಿಗೆ ತಜ್ಞ ವೈದ್ಯರ ತಂಡದಿಂದ ತರಬೇತಿ ಕೊಡಿಸಿ, ಆರೋಗ್ಯ ಹಸ್ತ ಕಿಟ್‍ಗಳನ್ನು ನೀಡಲಾಗಿದೆ ಎಂದರು.
ಈಗಾಗಲೇ ಕೆಪಿಸಿಸಿಯಿಂದ ನೀಡಿರುವ ಆರೋಗ್ಯ ಕಿಟ್ ಮೂಲಕ ಕೋರೋನಾ ವಾರಿರ್ಯಸ್‍ಗಳು ಹಳ್ಳಿ ಹಳ್ಳಿಗಳಲ್ಲಿ ಕೋರೊನಾ ವೈರಸ್ ಪರೀಕ್ಷೆ ಮಾಡಿ, ವೈರಾಸ್ ತಗಲುವವರಿಗೆ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡುವ ಜೊತೆಗೆ ವೈದ್ಯರ ಬಳಿಗೆ ಕರೆದೊಯ್ಯವ ಕೆಲಸವನ್ನು ಮಾಡುತ್ತಿದ್ದಾರೆ. ಇದೊಂದು ಮಾನವೀಯ ಮೌಲ್ಯವುಳ್ಳ ಕಾರ್ಯವಾಗಿದ್ದು, ನಮ್ಮ ಗ್ರಾಮವನ್ನು ನಾವು ಸುರಕ್ಷಿತವಾಗಿಟ್ಟುಕೊಂಡರೆ, ಎಲ್ಲರ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ. ಇದನ್ನು ಅರಿವು ಪ್ರತಿಯೊಬ್ಬರು ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಅಭಿಯಾನಕ್ಕೆ ಹೆಚ್ಚಿನ ಬೆಂಬಲ ನೀಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಆಸ್ಗರ್ ಮಾತನಾಡಿ, ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಮೇಶ್, ನಾಗಣ್ಣೇಗೌÀಡ, ಕೆಂಚೇಗೌಡ ಅವರನ್ನು ಕೋರೋನಾ ವಾರಿಯಾಸ್ ಆಗ ನೇಮಕ ಮಾಡಿ, ತರಭೇತಿಯನ್ನು ನೀಡಲಾಗಿದೆ. ಇಂದು ಶಾಸಕರು ಅಧಿಕೃತವಾಗಿ ನಿಮ್ಮ ಗ್ರಾಮದಲ್ಲಿ ಚಾಲನೆ ನೀಡಿದ್ದಾರೆ. ಈ ಮೂವರು ಸಹ ಪ್ರತಿ ಮನೆಮನೆಗೆ ತೆರಳಿ ಪರೀಕ್ಷೆ ಮಾಡುವ ಮೂಲಕ ನಿಮ್ಮ ಮನೆ ಎಲ್ಲರ ಆರೋಗ್ಯ ಸುರಕ್ಷತೆಯನ್ನು ನೋಡಿಕೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ವೀಕ್ಷಕ ಕೆ.ಎಂ. ಅಕ್ಬರ್ ಅಲೀ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಎಂ. ಶಿವಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಸ್ವಾಮಿ, ಯ. ಮಹದೇವಯ್ಯ, ಉಸ್ಮಾನ್ ಸಾಹೇಬ್, ಪ್ರಮೋದ್, ವಾರಿರ್ಯಸ್‍ಗಳಾದ ರಮೇಶ್, ನಾಗಣ್ಣೇಗೌಡ, ಕೆಂಚೇಗೌಡ ಇತರರು ಇದ್ದರು.