ಸುತ್ತಮುತ್ತಲಿನ ಗ್ರಾಮಗಳನ್ನು ಅಭಿವೃದ್ದಿ ಪಡೆಸಿದರೆ ಮಹಾನಗರ ಪಾಲಿಕೆಯನ್ನಾಗಿಸಲು ಸಾಧ್ಯ

ಕೋಲಾರ,ಜ,೧೭- ಕೋಲಾರ ನಗರದ ಸುತ್ತಮುತ್ತಲಿನ ಗ್ರಾಮಗಳು ಒಳಗೊಂಡಂತೆ ಅಭಿವೃದ್ದಿ ನಕಾಶೆಯನ್ನು ರಚಿಸಿ ಸರ್ಕಾರದಿಂದ ಅನುಮತಿ ಪಡೆದು ಕೊಂಡಲ್ಲಿ ಕೋಲಾರವು ಮಹಾನಗರ ಪಾಲಿಕೆಯನ್ನಾಗಿ ಮೇಲ್ದೆರ್ಜೆ ಮಾರ್ಪಾಡು ಅಗಲಿದೆ. ಸರ್ಕಾರದಿಂದಲೂ ಅಭಿವೃದ್ದಿಗೆ ಕೋಟ್ಯಾಂತ ರೂಪಾಯಿ ಮಂಜೂರು ಮಾಡಲಿದೆ. ಜನಜೀವನವು ಉತ್ತಮವಾಗಲು ಸಹಕಾರಿಯಾಗಲಿದೆ ಎಂದು ನಿಕಟಪೂರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅಭಿಪ್ರಾಯ ಪಟ್ಟರು,
ನಗರದ ಟಮಕ ಲೇ ಹೌಟ್‌ನಲ್ಲಿ ಶ್ರೀದೇವರಾಜು ಅರಸು ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಾ ಕೋಲಾರದ ನಗರದ ಸುತ್ತಮುತ್ತಲಿರುವ ಟಮಕ,ಗದ್ದೆ ಕಣ್ಣೂರು, ಹೊನ್ನೇನಹಳ್ಳಿ, ಬಸವನತ್ತ, ಕೋಡಿರಾಮಸಂದ್ರ, ಗಾಜಲದಿನ್ನೆ, ಹಸ್ಸಾಳ, ಛತ್ರಕೋಡಿಹಳ್ಳಿ, ಅಮ್ಮೇರಹಳ್ಳಿ, ಕೊಂಡರಾಜನಹಳ್ಳಿ, ಸೇರಿದಂತೆ ಸಂಬಂಧ ಪಟ್ಟ ಗ್ರಾಮಗಳನ್ನು ಒಳಗೊಂಡಂತೆ ಸಮರ್ಪಕವಾದ ಮೂಲಸೌಲಭ್ಯಗಳ ನಕಾಶೆ gಯೋಜನೆ ರೂಪಿಸಿ ಕೆ.ಯು.ಡಿ.ಎ. ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು,
ಈಗಾಗಲೇ ಇದಕ್ಕೆ ಸಂಬಂಧ ಪಟ್ಟಂತೆ ನಕಾಶೆ ಯೋಜನೆಯನ್ನು ರಚಿಸಲು ಬೆಂಗಳೂರಿನ ಖಾಸಗಿ ಇಂಜನಿಯರ್ ರತ್ನಕಾರ್ ಅವರಿಗೆ ಸೂಚಿಸಲಾಗಿದೆ. ಇದನ್ನು ಕೆ.ಯು.ಡಿ.ಎ. ಮೂಲಕ ಸರ್ಕಾರದ ಗಮನ ಸೆಳೆಯಲು ಸಂಬಂಧ ಪಟ್ಟ ಜನಪ್ರತಿನಿಧಿಗಳ ಮೇಲೆ ನಿಮ್ಮ ಸಂಘವು ಒತ್ತಡ ತರಲು ಪ್ರಯತ್ನ ಮಾಡ ಬೇಕಾಗಿದೆ. ಈ ಯೋಜನೆಯೂ ಯಶಸ್ವಿಯಾದಲ್ಲಿ ಕೋಲಾರವನ್ನು ಮಾದರಿ ನಗರವನ್ನಾಗಿ ರೂಪಿಸ ಬಹುದಾಗಿದೆ. ಕೆ.ಯು.ಡಿ.ಎ. ಮತ್ತು ಕ್ಷೇಮಾಭಿವೃದ್ದಿ ಸಂಘವು ಕೋಲಾರದ ಇತಿಹಾಸದಲ್ಲಿ ತಮ್ಮದೆ ಆದಾ ಹೆಜ್ಜೆಯ ಗುರುತುಗಳನ್ನು ದಾಖಲಿಸ ಬಹುದಾಗಿದೆ. ಇದಕ್ಕೆ ಪೂರಕವಾದ ಸಹಕಾರ ನನ್ನಿಂತ ಸದಾಕಾಲ ಇರುತ್ತದೆ ಎಂದು ಭರವಸೆ ನೀಡಿದರು.
ನಗರದ ಸುತ್ತಮುತ್ತ ಇರುವ ಲೇಹೌಟ್‌ಗಳು ನಿರ್ಮಿಸುವಾಗ ಹಾಗೂ ಮನೆಗಳ ನಿರ್ಮಾಣದ ಸಂದರ್ಭದಲ್ಲಿ ಸಮರ್ಪಕವಾದ ನಿಯಮಗಳನ್ನು ಪಾಲಿಸ ಬೇಕು, ಪ್ರತಿಯೊಬ್ಬರೂ ತೆರಿಗೆಗಳನ್ನು ಸಮರ್ಪಕವಾಗಿ ಪಾವತಿಸಿದಾಗ ಮಾತ್ರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯ. ಇದರಿಂದ ನಗರವು ಸೌಂದರ್ಯಕರಣವಾಗಲು ಸಾಧ್ಯ. ಮುಂದಿನ ೧೦ ವರ್ಷದಲ್ಲಿ ಈ ಬಡಾವಣೆಗಳು ಬೆಂಗಳೂರಿನ ಡಾಲರ್ ಕಾಲೂನಿಯ ಮಾದರಿಯಲ್ಲಿ ಅಭಿವೃದ್ದಿಗೊಳ್ಳ ಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್ ಮಾತನಾಡಿ ಯಾವೂದೇ ಬಡಾವಣೆ ನಿರ್ಮಾಣಕ್ಕೆ ಸಮರ್ಪಕವಾದ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿದ್ದರೆ ಮಾತ್ರ ಕೆ.ಯು.ಡಿ.ಎ. ಲೇಹೌಟ್‌ಗಳಿಗೆ ಅನುಮತಿ ನೀಡುವುದು. ಅದರೆ ಕೆ.ಯು.ಡಿ.ಎ. ಲೇಹೌಟ್‌ಗಳಲ್ಲಿಯೇ ಸಮರ್ಪಕವಾದ ಮೂಲಭೂತ ಸೌಲಭ್ಯಗಳಿಲ್ಲದೆ ಹತ್ತಾರು ವರುಷಗಳಿಂದ ಅಸ್ಥಿದಲ್ಲಿದೆ ಎಂಬುವುದು ಪ್ರಶ್ನಾತೀತವಾಗಿದೆ ಎಂದರು.
ಕೆ.ಯು.ಡಿ.ಎ. ಲೇಹೌಟ್‌ಗಳ ನಿವೇಶಗಳು ಸ್ವಚ್ಚತೆ ಇಲ್ಲದೆ ಸಮರ್ಪಕವಾದ ಮೂಲ ಭೂತ ಸೌಲಭ್ಯಗಳಿಲ್ಲದ ಹಿನ್ನಲೆಯಲ್ಲಿ ಅಕ್ರಮ ಚಟುವಟಿಕಗಳ ತಾಣವಾಗಿತ್ತು. ರಸ್ತೆಗಳನ್ನು ಹಂತ,ಹಂತವಾಗಿ ಸ್ವಚ್ಚಗೊಳಿಸುವ ಕೆಲಸಗಳನ್ನು ಮಾಡಿದ ಮೇಲೆ ನಿಯಂತ್ರಣಕ್ಕೆ ಬಂದಿದೆ ಎಂದ ಅವರು ಕೆ.ಯು.ಡಿ.ಎ.ಯಲ್ಲಿ ೧೫-೨೦ ಮಂದಿ ಅಧ್ಯಕ್ಷರಾಗಿದ್ದರೂ ಅಭಿವೃದ್ದಿಯ ಇಚ್ಚಾಶಕ್ತಿ ಅಗತ್ಯವಾಗಿದೆ ಇವರೊಂದಿಗೆ ಜನಪ್ರತಿನಿಧಿಗಳಾದ ಶಾಸಕರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಸಮಿತಿಯಲ್ಲಿದ್ದರೂ ಅಭಿವೃದ್ದಿಯಾಗದಿರುವುದು ಶೋಚನಿಯ ಸಂಗತಿಯಾಗಿದೆ ಎಂದರು
ನಾನು ಅಧಿಕಾರ ವಹಿಸಿ ಕೊಂಡ ನಂತರ ೪,೯೮ ಕೋಟಿ ರೂ ನೀರಿನ ಪೈಪು ಅಳವಡಿಕೆ ಕಾಮಗಾರಿಗಳಿಗೆ ಮಂಜೂರು ಮಾಡಲು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದೆ.ಪೈಪುಗಳನ್ನು ೨೭ ಕಿ.ಮಿ,ವರೆಗೆ ಅಳವಡಿಸ ಬಹುದಾಗಿದೆ. ೨.೨೦ ಕೋಟಿ ರೂಗಳ ರಸ್ತೆಗಳ ಅಭಿವೃದ್ದಿಗೆ ಪ್ರಸ್ತಾವನೆ ಸಲ್ಲಿದೆ. ಹಾಗೂ ಎಸ್.ಪಿ.ಕಚೇರಿಯ ಮುಂದಿನ ಉದ್ಯಾನವನ ಹಾಗೂ ರಸ್ತೆಗಳ ಅಭಿವೃದ್ದಿಗೆ ಶೀಘ್ರದಲ್ಲೇ ಮಂಜೂರಾತಿ ಸಿಗಲಿದೆ ಎಂದು ವಿವರಿಸಿದರು.