ಸುತಗಟ್ಟಿ ಆಯ್ಕೆ


ಚನ್ನಮ್ಮನ ಕಿತ್ತೂರ,ನ.9: ರಾಜ್ಯದ ಕಾಂಗ್ರೇಸ್ ಪಕ್ಷಕ್ಕೆ ಅಲ್ಪಸಂಖ್ಯಾಂತರ ಘಟಕದ ಕಾರ್ಯದರ್ಶಿಯಾಗಿ ಕಾಂಗ್ರೇಸ್ ಮುಖಂಡ ಹಾಗೂ ಮಾಜಿ ಪ.ಪಂ. ಅಧ್ಯಕ್ಷ ಮಹಮ್ಮದ ಹನೀಫ್ ಸುತಗಟ್ಟಿ ಆಯ್ಕೆಯಾಗಿದ್ದು ರಾಜ್ಯ ಅಲ್ಪಸಂಖ್ಯಾಂತರ ಘಟಕದ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಆದೇಶ ಹೊರಡಿಸಿದ್ದಾರೆ. ಕಿತ್ತೂರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಗೆಳೆಯರ ಬಳಗ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸುತಗಟ್ಟಿಯವರನ್ನು ಸನ್ಮಾನಿಸಿದರು. ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ನಿಚ್ಛಣಕಿ ಗ್ರಾ.ಪಂ. ಅಧ್ಯಕ್ಷ ಅಶೋಕ ಮಾಳಗಿ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಾವಂತ ಕಿರಬನವರ, ಪ.ಪಂ. ಸದಸ್ಯ ಶಂಕರ ಬಡಿಗೇರ, ಜಿಲ್ಲಾ ಮಾಧ್ಯಮದ ಪ್ರತಿನಿಧಿ ಬೈಲೂರಿನ ಗುಲಾಬ ಬಾಳೇಕುಂದರಗಿ, ಕೆಪಿಸಿಸಿ ಸಂಯೋಜಕರುಗಳಾದ ರಮೇಶ ಮೊಕಾಶಿ, ಪುಂಡಲೀಕ ನೀರಲಕಟ್ಟಿ, ಮುಖಂಡರುಗಳಾದ ನಾನಾಸಾಹೇಬ ಪಾಟೀಲ, ದೇಗಾಂವ ಚಂದ್ರಗೌಡ ಪಾಟೀಲ, ಸಂಜೀವ ಲೋಕಾಪೂರ ಹಾಗೂ ಸರ್ವ ಪ.ಪಂ. ಸದಸ್ಯರು, ಗೆಳೆಯರ ಬಳಗ ಉಪಸ್ಥಿತರಿದ್ದರು.