
ಕೋಲಾರ,ಏ,೨೮- ರಾಷ್ಟ್ರ ವ್ಯಾಪ್ತಿ ಬಿಜೆಪಿ ಅಲೆ ಸೃಷ್ಠಿಯಾಗಿದೆ. ಬಿಜೆಪಿ ನಾಯಕರುಗಳು ಚುನಾವಣೆಯ ಪ್ರಚರದಲ್ಲಿ ಧೂಳು ಎಬ್ಬಿಸುತ್ತಿದ್ದಾರೆ, ಸುಡು ಬೇಸಿಗೆಗಿಂತ ರಾಜ್ಯದಲ್ಲಿ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರದ ಕಾವನ್ನು ವಿಪಕ್ಷಗಳು ಎದುರಿಸಲಾಗದೆ ತತ್ತರಿಸುತ್ತಿದೆ ಎಂದು ವಿಧಾನಪರಿಷತ್ ಸಚೇತಕ ವೈ.ಎ.ನಾರಾಯಣಸ್ವಾಮಿ ಟೀಕಿಸಿದರು,
ನಗರದ ಬಿಜೆಪಿ ಕಚೇರಿಯಲ್ಲಿ ನೂತನವಾಗಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದ ಅವರು ಮಾತನಾಡಿ ನಾಡದ್ದು ಏ,೩೦ರ ಭಾನುವಾರ ಬೆಳಿಗ್ಗೆ ರಾಷ್ಟ್ರದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಚುನಾವಣಾ ಪ್ರಚಾರಕ್ಕೆ ಪ್ರಪ್ರಥಮವಾಗಿ ಕೋಲಾರದಿಂದಲೇ ಚಾಲನೆ ನೀಡಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು ಮೂರು ಜಿಲ್ಲೆಗಳಿಂದು ಸುಮಾರು ೩ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.ಸಮಾವೇಶಕ್ಕೆ ಪೂರಕವಾಗಿ ಅಗತ್ಯವಾದ ಎಲ್ಲಾ ಸಿದ್ದತೆಗಳು ಭರದಿಂದ ಸಾಗಿದೆ ಎಂದು ಹೇಳಿದರು,
ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅಮಿತ್ ಷಾ, ಯೋಗಿ, ಸ್ಮತಿಇರಾನಿ, ಸೇರಿದಂತೆ ಅನೇಕ ಬಿಜೆಪಿ ಪಕ್ಷದ ನಾಯಕರುಗಳು ಭಾಗವಹಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯ ಪ್ರಚಾರವು ಸುನಾಮಿ ಮಾದರಿಯಲ್ಲಿ ಹವಾ ಬೀಸಿದ್ದಾರೆ ಎಂದರು,
ನಮೋ ಅವರು ಇಂದು ಬೆಳಿಗ್ಗೆ ರಾಜ್ಯದ ೫೦ ಲಕ್ಷ ಕಾರ್ಯಕರ್ತರೊಂದಿಗೆ ಏಕ ಕಾಲದಲ್ಲಿ ಸಂವಾದ ನಡೆಸಿದ್ದಾರೆ. ಸುಮಾರು ೧.೧೦ ಗಂಟೆಗಳ ಕಾಲ ನಡೆಸಿದ ಸಂವಾದದಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ವಿವರಿಸಿ, ಕೋರೋನಾ ಹಾಗೂ ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ಡಬಲ್ ಇಂಜಿನ್ ಸರ್ಕಾರದ ಎದುರಿಸಿದ ಸಂಕಷ್ಠಗಳು ನಂತರದ ಅಭಿವೃದ್ದಿ ಕಾರ್ಯಗಳನ್ನು ಮತದಾರರಿಗೆ ಮನದಟ್ಟು ಮಾಡುವಂತ ಹಲವು ಮಾರ್ಗಸೂಚಿಗಳು ತಿಳಿಸಿದ್ದಾರೆ. ಗ್ರಾಮೀಣ ಭಾಗದ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಬಿಜೆಪಿ ಪರವಾಗಿ ಪ್ರಚಾರ ಕೈಗೊಂಡು ಅಧಿಕಾರಕ್ಕೆ ತರುವಂತ ಸಂಕಲ್ಪವನ್ನು ಮಾಡುವಂತೆ ಪ್ರೇರೇಪಿಸಿದರು ಎಂದು ವಿವರಿಸಿದರು,
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷೆ ಡಾ. ವೇಣುಗೋಪಾಲ್, ಜಿಲ್ಲಾ ವಕ್ತಾರ ಎಸ್.ಬಿ. ಮುನಿವೆಂಕಟಪ್ಪ, ಜಿಲ್ಲಾ ಉಸ್ತುವಾರಿ ಚಿರಂಜೀವಿ ರೆಡ್ಡಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ಮಾಧ್ಯಮ್ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ರಾಜೇಶ್ ಸಿಂಗ್, ತಾಲ್ಲೂಕು ಅಧ್ಯಕ್ಷ ತಿಮ್ಮರಾಯಪ್ಪ, ನಿರ್ಮಲಮ್ಮ, ನಾರಾಯಣಸ್ವಾಮಿ, ನಗರಸಭಾ ಸದಸ್ಯರಾದ ಸತೀಶ್, ರಾಜೇಶ್, ಮಂಜುನಾಥ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು,