ಸುಡು ಬಿಸಿಲಿನಲ್ಲೇ ಪೊಲೀಸರಿಂದ ವಾಹನ ತಪಾಸಣೆ ; ಬಿಗಿ ಕ್ರಮ

ಹರಿಹರ.ಏ.29 ; ಎರಡನೇ ದಿನಕ್ಕೆ ಪ್ರಾರಂಭವಾಗಿರುವ ಜನತಾ ಕರ್ಫ್ಯೂ  ಹಿನ್ನೆಲೆಯಲ್ಲಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ನಾಕಾಬಂದಿ ಹಾಕಿ ಹೋಗುವ ಬರುವ ವಾಹನಗಳನ್ನು ತಪಾಸಣೆ ಮಾಡಿ ಕಾರಣವಿಲ್ಲದೆ ಓಡಾಡುವವರಿಗೆ ವಾಹನ ಸವಾರರಿಗೆ ದಂಡ ಮತ್ತು ವಾಹನಗಳನ್ನು ಸೀಜ್ ಮಾಡುವುದಕ್ಕೆ ನಗರ ಠಾಣೆ ಪಿಎಸ್ ಐ ಸುನಿಲ್ ಬಸವರಾಜ ತೇಲಿ ಮುಂದಾದರು ಈ ವೇಳೆ ಮಾತನಾಡಿದ ಅವರು ಸರ್ಕಾರವು ಕಟ್ಟುನಿಟ್ಟಿನ ಆದೇಶ ಜರುಗಿಸಿದರು ಬೈಕ್ ವಾಹನಗಳಲ್ಲಿ ಸಂಚರಿಸುತ್ತಿದ್ದವರಿಗೆ ದಂಡದ ಬಿಸಿ ಮುಟ್ಟಿಸಿ ಕಾರ್ಯ ನಾವು ಮಾಡುತ್ತಿದ್ದೇವೆ ಎಂದರು ಕೋವಿಂಡ ಮಾರ್ಗ ಸೂಚಿಗಳ ಅನ್ವಯ ಪ್ರಕಾರ ಮದುವೆ ಮತ್ತು ಇತರೆ ಸಮಾರಂಭಗಳಿಗೆ ವಾಹನಗಳಲ್ಲಿತೆರಳುವವರಿಗೆ ಪರವಾನಗಿಯನ್ನು ಪಡೆದಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಇಂದು ಬೆಳಿಗ್ಗೆ 6ಗಂಟೆಯಿಂದ ಹತ್ತು ಗಂಟೆಯವರೆಗೆ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮುಂದಾದರೂ ಹತ್ತು ಗಂಟೆಯ ನಂತರ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ ನಮ್ಮ ಇಲಾಖೆಯ ಗಸ್ತು ವಾಹನಗಳಲ್ಲಿ ನಗರದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ತೆರಳಿ ತೆರೆದಿರುವ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ ಅನವಶ್ಯಕವಾಗಿ ಬೈಕ್ ಇತರೆ ವಾಹನಗಳಲ್ಲಿ ಸಂಚರಿಸುವವರಿಗೆ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ .ಕಾರಣವಿಲ್ಲದೆ ರಸ್ತೆಗೆ  ಇಳಿದರೆ ಮುಲಾಜಿಲ್ಲದೆ ದಂಡ ಮತ್ತು ವಾಹನಗಳನ್ನು ಸೀಜ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.