ಸುಡು ಬಿಸಿಲಿನಲ್ಲೂ ಬಿರುಸಿನ ಮತದಾನ

ಕಾಳಗಿ.ಮೇ.8: ಬೀದರ ಲೋಕಸಭಾ ಕ್ಷೇತ್ರದ ಕಾಳಗಿ ಪಟ್ಟಣದಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಸುಡು ಬಿಸಿಲಿನಲ್ಲನ್ನೂ ಲೆಕ್ಕಿಸದೆ ಬಿರುಸಿನ ಮತದಾನ ಮಾಡಿದರು.
ಕಾಳಗಿ ಪಟ್ಟಣದಲ್ಲಿ ಬಿಸಿಲಿನ ತಾಪಮಾನ 42ಡಿಗ್ರಿ ಸೆಲ್ಸಿಯಸಗಿಂತ ಹೆಚ್ಚು ದಾಖಲಾಗುತ್ತಿದ್ದರು ಮತದಾರರು ಮನೆಯಲ್ಲಿ ಕುಳಿತುಕೊಳ್ಳದೆ ಮತದಾನ ಕೇಂದ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡು ಬಂದಿತು.

ಕಾಳಗಿ ಪಟ್ಟಣದಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಮತದಾನ ಕೇಂದ್ರ ಸಂಖ್ಯೆ 213 ಒಟ್ಟು 876 ಮತಗಳಲ್ಲಿ 619ಮತ ಚಲಾವಣೆಯಾಗಿವೆ,
ಮತದಾನ ಕೇಂದ್ರ 214ರಲ್ಲಿ ಒಟ್ಟು 726 ಮತದಾರರಲ್ಲಿ 550 ಮತ ಚಲಾವಣೆಯಾಗಿವೆ, ಮತದಾನ ಕೇಂದ್ರ ಸಂಖ್ಯೆ 215ರಲ್ಲಿ ಒಟ್ಟು 875 ಮತಗಳಲ್ಲಿ 575 ಮತಗಳು ಚಲಾವಣೆಯಾಗಿವೆ, ಮತದಾನ ಕೇಂದ್ರ ಸಂಖ್ಯೆ 216ರಲ್ಲಿ ಒಟ್ಟು 1312 ಮತದಾರಲ್ಲಿ 871ಮತಗಳು ಚಲಾವಣೆಯಾಗಿವೆ,
ಮತದಾನ ಕೇಂದ್ರ ಸಂಖ್ಯೆ 217ರಲ್ಲಿ ಒಟ್ಟು 999ಮತಗಳಲ್ಲಿ 671ಮತ ಚಲಾವಣೆಯಾಗಿವೆ, ಮತದಾನ ಕೇಂದ್ರ ಸಂಖ್ಯೆ 218ರಲ್ಲಿ ಒಟ್ಟು 1122ಮತಗಳಲ್ಲಿ 691ಮತ ಚಲಾವಣೆಯಾಗಿವೆ, ಮತದಾನ ಕೇಂದ್ರ ಸಂಖ್ಯೆ 219ರಲ್ಲಿ ಒಟ್ಟು 770 ಮತಗಳಲ್ಲಿ 469ಮತ ಚಲಾವಣೆಯಾಗಿವೆ, ಮತದಾನ ಕೇಂದ್ರ ಸಂಖ್ಯೆ 220ರಲ್ಲಿ ಒಟ್ಟು 1458ಮತಗಳಲ್ಲಿ 766ಮತ ಚಲಾವಣೆಯಾಗಿವೆ ಒಟ್ಟಾರೆ ಕಾಳಗಿ ಪಟ್ಟಣದಲ್ಲಿ ಒಟ್ಟು 8138ಮತಗಳಲ್ಲಿ 5192 ಮತ ಚಲಾವಣೆಯಾಗಿದ್ದು ಶೇ. 63.79 ಮತದಾನವಾಗಿದೆ ಎಂದು ಚುನಾವಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.