ಸುಡಾನ್ ಹಿಂಸಾಚಾರ; ಭಾರತೀಯರ ಸ್ಥಳಾಂತರಕ್ಕೆ ಯುಎಇ ಸರ್ಕಾರ ನೆರವು

ನವದೆಹಲಿ,ಏ.23- ಸುಡಾನ್‌ ಹಿಂಸಾಚಾರದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ.

ಭಾರತದ ಪ್ರಜೆಗಳ ಜೊತೆಗೆ ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಟುನೀಶಿಯಾ, ಪಾಕಿಸ್ತಾನ, ಬಲ್ಗೇರಿಯಾ, ಬಾಂಗ್ಲಾದೇಶ, ಫಿಲಿಪೈನ್ಸ್, ಕೆನಡಾ, ಮತ್ತು ಬುರ್ಕಿನಾ ಫಾಸೊ. ದೇಶಗಳ ಪ್ರಜೆಗಳ ರಕ್ಷಣೆ ಮಾಡಲಾಗುವುದು ಎಂದು ಯುಎಇ ಸರ್ಕಾರ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸೌದಿ ಮತ್ತು ಯುಎಇ ವಿದೇಶಾಂಗ ಸಚಿವರ ಜೊತೆ ಚರ್ಚೆ ನಡೆಸಿದ ಬಳಿಕ ಸೌದಿ ಯುಎಇ ಈ ವಿಷಯ ಹೊರಹಾಕಿದೆ.

ಸೌದಿ ಅರೇಬಿಯಾ ಸಾಮ್ರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ, “ರಾಜ್ಯಗಳ ನಾಯಕತ್ವದ ನಿರ್ದೇಶನಗಳ ಅನುಷ್ಠಾನದಲ್ಲಿ, ಸುಡಾನ್ ಗಣರಾಜ್ಯದಿಂದ ಸ್ಥಳಾಂತರಿಸಲ್ಪಟ್ಟ ಸಾಮ್ರಾಜ್ಯದ ನಾಗರಿಕರ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸೌದಿ ಮತ್ತು ಯುಎಇ ಸಹವರ್ತಿಗಳೊಂದಿಗೆ ಈ ವಿಷಯವನ್ನು ಚರ್ಚಿಸಿದ ಕೆಲವು ದಿನಗಳ ನಂತರ ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಜೈಶಂಕರ್ ಅವರು ಏಪ್ರಿಲ್ 19 ರಂದು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಯ ಸಹವರ್ತಿಗಳೊಂದಿಗೆ ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಿದ್ದರು.

ಈ ನಡುವೆ ಭಾರತ ಸುಡಾನ್‌ನಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ವಿಶೇಷವಾಗಿ ಆಫ್ರಿಕನ್ ದೇಶದಲ್ಲಿ ನೆಲೆಸಿರುವ ಭಾರತೀಯರ ಮೇಲಿನ ಕಾಳಜಿಯ ದೃಷ್ಟಿಯಿಂದ.ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ