ಸುಡಾನ್‌ನಿಂದ ೧೩೧ ಮಂದಿ ಭಾರತೀಯರು ಸ್ವದೇಶಕ್ಕೆ

ನವದೆಹಲಿ, ಮೇ.೩-ಸುಡಾನ್ ನೆಲದಲ್ಲಿ ಭಾರತೀಯರನ್ನು ರಕ್ಷಿಸುವ ಕಾರ್ಯ ಮುಂದುವರಿದ್ದು, ಸಂಕಷ್ಟ ಸ್ಥಿತಿಯಲ್ಲೂ ಮತ್ತೊಂದು ಬ್ಯಾಚ್‌ನಲ್ಲಿ ೨೩೧ ಭಾರತ ಮೂಲದ ಪ್ರಜೆಗಳು ತಾಯ್ನಾಡು ತಲುಪಿದ್ದಾರೆ.
ಈ ಪೈಕಿ ೨೦೮ ಮಂದಿ ಗುಜರಾತ್ ನಿವಾಸಿಗಳಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ದೇಶಗಳ ಪ್ರಜೆಗಳನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿ ಇರುವಾಗಲೇ, ರಕ್ಷಣಾ ಕಾರ್ಯಕ್ಕೆ ಸಹಾಯ ಆಗಲಿ ಎಂದು ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಮೊದಲು ೭೨ ಗಂಟೆ ಕಾಲ ಕದನ ವಿರಾಮ ಘೋಷಿಸಲಾಗಿತ್ತು, ಈಗ ಮತ್ತೆ ಇನ್ನೂ ೭೨ ಗಂಟೆ ಕಾಲ ಕದನ ವಿರಾಮ ವಿಸ್ತರಣೆ ಮಾಡಲಾಗಿದೆ. ಆದರೂ ಅಲ್ಲಲ್ಲಿ ಬಾಂಬ್ ಮತ್ತು ಗುಂಡಿನ ಸದ್ದು ಕೇಳಿಬರುತ್ತಿದೆ. ಸುಡಾನ್ ನೆಲದಲ್ಲಿ ಸಾವಿನ ಸಂಖ್ಯೆ ಈವರೆಗೂ ೫೦೦ ಗಡಿ ದಾಟಿದ್ದು, ೬೦೦ ತಲುಪುವ ಆತಂಕ ಮೂಡಿದೆ. ಹಾಗೇ ೫೦೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.