
ನವದೆಹಲಿ, ಏ.೨೭- ಸುಡಾನ್ ಸಂಘರ್ಷದಲ್ಲಿ “ಯಾವುದೇ ಕ್ಷಣದಲ್ಲಿ ಸಾಯಬಹುದಿತ್ತು” ಅಲ್ಲಿಂದ ವಾಪಸ್ಸು ಬಂದಿದ್ದು ನಮ್ಮ ಪುಣ್ಯ..”.
ಹೀಗಂತ ಸುಡಾನ್‌ನಿಂದ ದೆಹಲಿಗೆ ಬಂದ ಭಾರತೀಯರ ತಂಡ ಸೂಡಾನ್ ಸೇನೆ ಮತ್ತು ಅರೆ ಸೇನೆ ಪಡೆಯ ಸಂಘರ್ಷದಲ್ಲಿ ತಾವು ಎದುರಿಸಿದ ಭಯಾನಕ ಸನ್ನಿವೇಶಗಳನ್ನು ಬಿಟ್ಟಿಟ್ಟಿದ್ದು ಹೀಗೆ.
ನೆರೆಹೊರೆಯ ಮನೆಗಳಿಗೆ ಬಾಂಬ್ ದಾಳಿ, ಕ್ಷಿಪಣಿಗಳು ಮೇಲಕ್ಕೆ ಹಾರುವುದನ್ನು ಮತ್ತು ೧೦ ದಿನಗಳ ಕಾಲ ಜನರನ್ನು ಗನ್ ಪಾಯಿಂಟ್‌ನಲ್ಲಿ ದರೋಡೆ ಮಾಡಿದ ಅನುಭವವಾಗಿತ್ತು. ಯಾವುದೇ ಕ್ಷಣದಲ್ಲಿ ಶೆಲ್ ದಾಳಿ ಅಥವಾ ಗುಂಡಿಗೆ ತಾವು ಬಲಿಯಾಗಬೇಕಾಗತ್ತು ಎನ್ನುವ ಆಘಾತಕಾರಿ ಸಂಘತಿ ಹೊರಹಾಕಿದ್ದಾರೆ.
ಸುಡಾನ್‌ನಲ್ಲಿ ಸಿಲುಕಿದ ೩ ಸಾವಿರಕ್ಕೂ ಅಧಿಕ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಸರ್ಕಾರ ಆಪರೇಷನ್ ಕಾವೇರಿ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಮೂರು ತಂಡಗಳು ಸೂಡಾನ್‌ನಿಂದ ಜೆಡ್ಡಾ ಮಾರ್ಗವಾಗಿ ದೆಹಲಿಗೆ ಬಂದಿದ್ದಾರೆ.
ಮನೆ ಮಠ, ಕೆಲಸ ಎಲ್ಲವನ್ನೂ ಬಿಟ್ಟು ಕುಟುಂಬದೊಂದಿಗೆ ದೆಹಲಿಗೆ ವಾಪಾಸ್ಸಾಗಿದ್ದೇವೆ ಎಂದು ದೆಹಲಿಗೆ ಬಂದಿಳಿದ ಮೊದಲ ಭಾರತೀಯರ ಗುಂಪು ೧೧ ದಿನಗಳ ಕಾಲ ಸುಡಾನ್‌ವಿವಿಧ ಭಾಗಗಳಲ್ಲಿ ಅನುಭವಿಸಿದ ನರಕ ಯಾತನೆಯನ್ನು ಕಣ್ಣಮುಂದೆ ಕಟ್ಟಿದ ಹಾಗೆ ಚಿತ್ರಿಸಿದ್ದಾರೆ,
ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಸಲುವಾಗಿ ಸುಡಾನ್‌ನಲ್ಲಿ ೭೨ ಗಂಟೆಗಳ ಕದನ ವಿರಾಮವನ್ನು ಘೋಷಿಸಿದ್ದರಿಂದ ೩೬೦ ಭಾರತೀಯರನ್ನು ನೌಕಾಪಡೆಯ ಹಡಗು ಮತ್ತು ಪೊ?ರ್ಟ್ ಸುಡಾನ್‌ನಿಂದ ಭಾರತೀಯ ವಾಯುಪಡೆಯ ವಿಮಾನ ಸಿ-೧೩೦ಎ ವಿಮಾನದಿಂದ ಭಾರತಕ್ಕೆ ಕರೆತರಲಾಗಿದೆ.
೪೫೦ಕ್ಕೂ ಅಧಿಕ ಮಂದಿ ಸಾವು:
ಸುಡಾನ್‌ನಲ್ಲಿ ಏಪ್ರಿಲ್ ಮಧ್ಯದಿಂದ, ೪೫೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ೪,೦೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿದೇಶಿ ಪ್ರಜೆಗಳನ್ನು ತಮ್ಮ ತಮ್ಮ ದೇಶಗಳಿಗೆ ಸ್ಥಳಾಂತರಿಸುವ ಸಲುಬಾಗಿ ೭೨ ಗಂಟೆಗಳ ಕದನ ವಿರಾಮದ ನಡುವೆಯೂ ಹಿಂಸಾಚಾರದ ವರದಿಗಳಿವೆ.