ಸುಜ್ಞಾನಿ ಪಾಟೀಲಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ವಿಜಯಪುರ:ಜ.18:ಶಿಕ್ಷಕಿ, ಕವಿಯತ್ರಿ ಸುಜ್ಞಾನಿ ಪಾಟೀಲ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ಜ. 21ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿದ್ದು, ಈ ಪ್ರಶಸ್ತಿಗೆ ಶಿಕ್ಷಕಿ, ಕವಿಯತ್ರಿ ಸುಜ್ಞಾನಿ ಪಾಟೀಲ ಆಯ್ಕೆಯಾಗಿದ್ದಾರೆ. ಪಶಸ್ತಿಗೆ ಭಾಜನರಾದ ಶಿಕ್ಷಕಿ ಪಾಟೀಲರ ಅವರಿಗೆ ನಗರದ ಹಲವು ಸಾಹಿತ್ಯ ವೇದಿಕೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.