ಸುಗ್ಗಿ ಹಬ್ಬ ಅಕ್ಷಯ ಪಾತ್ರ ಪೌಂಡೇಷನ್ ಆಚರಣೆ

ಹೊಸಕೋಟೆ.ಜ೧೯:ಸಕಲ ಜೀವರಾಶಿಗಳಿಗೂ ಅನ್ನ ನೀಡುವ ದೇವರು ನಮ್ಮ ಕೃಷಿಕ ಇವರಿಗೆ ಸಮಾಜಿಕ ಗೌರವ ಸ್ಥಾನಮಾನ ವಿಭಿನ್ನವಾಗಿದೆ ಎಂದು ಅಕ್ಷಯ ಪಾತ್ರ ಪೌಂಡೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ವೆಂಕಟ್ ಹೇಳಿದರು.
ತಾಲ್ಲೀಕಿನ ಸೂಲಿಬೆಲೆಯಲ್ಲಿ ಅಕ್ಷಯ ಪಾತ್ರ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸುಗ್ಗಿ ಹುಗ್ಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡಲು ನಮ್ಮ ಅಕ್ಷಯ ಪಾತ್ರ ಪೌಂಡೇಷನ್ ಗುಣಮಟ್ಟದ ಆಹಾರ ನೀಡುತ್ತಿದ್ದು ಇದಕ್ಕೆ ಬೆನ್ನಲುಬಾಗಿ ರೈತಾಪಿವರ್ಗದ ಸಹಕಾರ ಸಹ ದೊರೆಯುತ್ತಿದ್ದು ಗುಣಮಟ್ಟದ ತರಕಾರಿ,ಹಣ್ಣು ಹಂಪಲುಗಳು ಸರಬರಾಜು ಮಾಡುವುದರಿಂದ ಸದೃಡ ಆರೋಗ್ಯದಿಂದ ಬಲಿಷ್ಟ ದೇಶ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.
ರೈತ ಪಾಲುದಾರರಲ್ಲಿ ಹೆಚ್ಚಿನವರ ಮಕ್ಕಳು ಅಕ್ಷಯ ಪಾತ್ರ ಪೌಷ್ಟಿಕಾಂಶದ ಊಟವನ್ನು ನೀಡುವ ಶಾಲೆಗಳಲ್ಲಿ ಓದುತ್ತಿದ್ದಾರೆ,ಈ ಸಾಮರಸ್ಯದ ಬಂಧವು ರೈತರಿಗೆ ಬೆಂಬಲ ನೀಡುವುದು ಮಾತ್ರವಲ್ಲದೆ ಅವರ ಮಕ್ಕಳ ಯೋಗಕ್ಷೇಮವನ್ನು ಸಹ ಖಾತ್ರಿಗೊಳಿಸುತ್ತದೆ ಎಂದರು.
ಬಳಿಕ ಅಕ್ಷಯ ಪಾತ್ರ ಪೌಂಡೇಷನ್ ಬೆಂಗಳೂರು ಘಟಕ ಮುಖ್ಯಸ್ಥ ಜೀವನ್ ಮುಕ್ತ ಪ್ರಭು ಮಾತನಾಡಿ. ರೈತ ದೇಶದ ಬೆನ್ನಲಬು ಭೂಮಿ ತಾಯಿ ಅಶೀರ್ವಾದದಿಂದ ಪ್ರಾಣಿಪಕ್ಷಿಗಳು, ಜಲಚರ ಜೀವರಾಶಿಗಳು, ಮಾನವ ಸಂಕುಲಕ್ಕೆ ಅನ್ನನೀಡುವ ಶಕ್ತಿಯನ್ನು ಪಡೆದುಕೊಂಡಿರುವ ಇವರನ್ನು ನಾವು ಸದಾ ಸ್ಮರಿಸಬೇಕು ಗೌರವಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಧವಸದಾನ್ಯಗಳ ರಾಶಿ ಪೂಜೆ ನೆರವೇರಿಸಿದರು, ರೈತಾಪಿ ವರ್ಗಕ್ಕೆ ಸಂಕ್ರಾಂತಿ ಹಬ್ಬದ ಅಂಗವಾಗಿ ಎಳ್ಳುಬೆಲ್ಲ ನೀಡಿ,ಗೌರವ ಕಾಣಿಕೆ ನೀಡಿ ಗೌರವಿಸಿದರು ಸಾಂಸ್ಕೃತಿಕ ಕಲಾತಂಡಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಜನಾರ್ದನರೆಡ್ಡಿ, ಚಿಕ್ಕಬಳ್ಳಾಪುರ ಆರ್.ಎಂ.ಸಿ ಅಧ್ಯಕ್ಷ ಕೆ.ವಿ.ಸುರೇಶ್, ಮೈಸೂರು ಮಾರುಕಟ್ಟೆ ಅಧ್ಯಕ್ಷ ಸತೀಶ್, ಹಾಸನ ಜಿಲ್ಲಾ ರೈತ ಮುಖಂಡ ಶಿವಪ್ಪ, ಪ್ರಗತಿಪರ ರೈತ ನಾರಾಯಣಸ್ವಾಮಿ, ಮೂರ್ತಿ, ಗ್ರಾ.ಪಂ.ಸದಸ್ಯ ಕೆಇಬಿ ಮಹೇಶ್, ಸಂಸ್ಥೆಯ ಬೆಂಗಳೂರು ಕ್ಲಸ್ಟರ್ ಚೇತನ್, ಮುಕೇಶ್‌ತಿವಾರಿ, ವಿನೋಧ್, ಇತರರು ಇದ್ದರು.