ಸುಗ್ಗಿ ಸಂಭ್ರಮ ಕವಿಗೋಷ್ಠಿ ಫಲಿತಾಂಶ ಪ್ರಕಟ

ಕಲಬುರಗಿ.ಏ.05:ಇಂದು ಬೇಸಿಗೆ ಸುಡು ಬಿಸಿಲು ಒಂದೆಡೆಯಾದರೆ ಸುಗ್ಗಿ ಸಂಭ್ರಮದ ಸೊಬಗು ರೈತಾಪಿ ಜನರಲ್ಲಿ ಕಾಣುತ್ತೇವೆ. ಇಂತಹ ಅಪರೂಪವಾದ ‘ಸುಗ್ಗಿ ಸಂಭ್ರಮ’ ಎಂಬ ಆನ್‍ಲೈನ್ ಕವಿಗೋಷ್ಠಿ ಸ್ಪರ್ಧೆ ಭಾನುವಾರ ಜರುಗಿತು. ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಆಶ್ರಯದಲ್ಲಿ ಜರುಗಿದ ಆನ್‍ಲೈನ್ ಕವಿಗೋಷ್ಠಿ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
ಘಟಕದ ಜಿಲ್ಲಾದ್ಯಕ್ಷ ಮಹಾಂತೇಶ್ ಪಾಟೀಲ್ ಅವರ ನೇತೃತ್ವದಲ್ಲಿ ‘ಸುಗ್ಗಿ ಸಂಭ್ರಮ’ ಎಂಬ ಶಿರ್ಷಿಕೆಯಡಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಯುವ ಕವಿಗಳು, ಹಿರಿಯರು ಭಾಗವಹಿಸಿದರು. ಅವರಲ್ಲಿ ಅತ್ಯುತ್ತಮ ಮೂರು ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಮೂರು ಮೆಚ್ಚುಗೆ ಕವನಗಳೆಂದು ಆಯ್ಕೆ ಮಾಡಲಾಗಿದೆ.
ಶಿಕ್ಷಕ ಧರ್ಮಣ್ಣ ಎಚ್. ಧನ್ನಿ (ಪ್ರಥಮ), ಮಂಜುಶ್ರೀ ಬಿ. ಹಾವಣ್ಣನವರು (ದ್ವಿತೀಯ) ಹಾಗೂ ಸಂಗಮ್ಮ ಧರ್ಮುಕರ್ (ತೃತೀಯ) ಅವರು ಆಯ್ಕೆಯಾದರು. ಹಾಗೂ ರವಿಕುಮಾರ್ ನಂದಗೇರಿ, ಸಿದ್ದಲಿಂಗಯ್ಯ ನಂದಕೋಲ್, ನೀಲಮ್ಮ ಸಾಲಿಮಠ್ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಉಪನ್ಯಾಸಕ ಡಾ. ಅಶೋಕ್ ಬೆನ್ನೂರ್ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿ ಸಂಭ್ರಮ ನೋಡುವುದು ಒಂದು ಅಪರೂಪದ ಸನ್ನಿವೇಶ. ಈ ಕುರಿತು ಕವಿಗಳ ದೃಷ್ಠಿಯಲ್ಲಿ ಸುಗ್ಗಿ ಬಗ್ಗೆ ಅಭಿವ್ಯಕ್ತಗೊಂಡ ಕವನಗಳು ಓದುಗರಿಗೆ ಜೀವ ಸಂಸ್ಕøತಿ ಕಲಿಸಿತು. ಇದರಲ್ಲಿ ಕವಿ ಧರ್ಮಣ್ಣ ಧನ್ನಿ ಅವರ ‘ಸುಗ್ಗಿ ನಡೆದೈತಿ ಬಾ ಗೆಳತಿ ಹೊಲದಾಗ, ಹಿಗ್ಗಿಲೇ ರಾಶಿ ಮಾಡೋಣ ಜಗದಾಗ’ ಎಂಬ ಕವನ ಸುಗ್ಗಿ ಮಾಡುವ ಹಬ್ಬದ ವಾತವರಣ ಮತ್ತು ಅದರ ಸಾಂಸ್ಕøತಿಕ ಬದುಕನ್ನು ಅನಾವರಣಗೊಳಿಸಿದರು.
ಕವಯತ್ರಿ ಮಂಜುಶ್ರೀ ಅವರ ‘ಪಥವ ಬದಲಿಸಿದ ರವಿಯ ನೆನದು’ ಎಂಬ ಕವನ ಸುಗ್ಗಿಯ ವೈಶಿಷ್ಠತೆಯ ಚಿತ್ರಣ ಕಟ್ಟಿ ಕೊಟ್ಟಿದ್ದರು. ಎಲ್ಲ ಕವನಗಳು ಅರ್ಥಪೂರ್ಣವಾಗಿದ್ದವು. ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ.