ಸುಗ್ಗಿಯ ಹಾಡು ಹಾಡುತ್ತಾ ಭತ್ತ ನಾಟಿ ಮಾಡಿದ ಮಹಿಳೆಯರು

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೨೪: ಕಳೆದ ಒಂದು ವಾರದಿಂದ  ದಾವಣಗೆರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.ಉತ್ತಮ ಮಳೆ ಬಂದ ಹಿನ್ನೆಲೆಯಲ್ಲಿರೈತರು ಹರುಷಗೊಂಡಿದ್ದಾರೆ.ಬರದ ಛಾಯೆ ಆವರಿಸುತ್ತದೆ ಎಂದು ಆತಂಕಗೊಂಡಿದ್ದ ರೈತರು ಇದೀಗ ಉತ್ತಮ ಮಳೆಯಿಂದಾಗಿ ಬಿಡುವಿಲ್ಲದೆ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಉತ್ತಮ ಮಳೆಯಾದ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಭತ್ತ ನಾಟಿ ಮಾಡುವ ಕೆಲಸ ಚುರುಕುಗೊಂಡಿದೆ.ದಾವಣಗೆರೆ ತಾಲ್ಲೂಕಿನ ಚಿಕ್ಕಬೂದಿಹಾಳ ಗ್ರಾಮದಲ್ಲಿ ರೈತರು ವಿಶೇಷವಾಗಿ ಸುಗ್ಗಿ ಹಾಡು ಹಾಡುತ್ತ ಭತ್ತದ ನಾಟಿ ಮಾಡಿದ್ದಾರೆ.ಅದರಲ್ಲೂ ಮಹಿಳೆಯರು ಜಾನಪದ ಹಾಗೂ  ಸುಗ್ಗಿ ಹಾಡುಗಳನ್ನಾಡುತ್ತಾ ಭತ್ತ ನಾಟಿ ಮಾಡಿದ್ದು ಕಂಡುಬಂದಿತು.