ಸುಗೂರ(ಕೆ): ಗುರು ಗದ್ದುಗೆ ನಿರ್ಮಾಣ ಸಮಾರಂಭ ನಾಳೆ

ಕಾಳಗಿ.ಆ.2: ತಾಲೂಕಿನ ಸುಗೂರ(ಕೆ) ಗ್ರಾಮದ ಗುರುರುದ್ರಮುನೀಶ್ವರ ಸಂಸ್ಥಾನ ಮಠದ ಲಿಂ.ಪೂಜ್ಯ ರುದ್ರಮುನೀಶ್ವರ ಗುರುಗಳ ಗದ್ದುಗೆ ಪುನರ್ ನಿರ್ಮಾಣದ ನೀಲನಕ್ಷೆ ಬಿಡುಗಡೆ ಸಮಾರಂಭವನ್ನು ದಿನಾಂಕ:03-08-2022ರ ಬುಧವಾರ ಬೆಳಿಗ್ಗೆ 10-00ಘಂಟೆಗೆ ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪಿಠಾಧೀಪತಿ ಪೂಜ್ಯ ಡಾ.ಚನ್ನರುದ್ರಮುನಿ ಶಿವಾಚಾರ್ಯರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆಸಿರುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂ.ರುದ್ರಮುನೀಶ್ವರ ಗುರುಗಳ ಗದ್ದುಗೆ ನೀಲನಕ್ಷೆ ಸಮಾರಂಭಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್, ಡಿ.ಎಸ್.ಮ್ಯಾಕ್ಸ್ ಮುಖ್ಯಸ್ಥ ಡಾ. ಎಸ್.ಪಿ.ದಯಾನಂದ, ಚಿತ್ತಾಪೂರ ತಹಸೀಲ್ದಾರ ಉಮಕಾಂತ ಹಳ್ಳೆ, ಕಾಳಗಿ ತಹಸೀಲ್ದಾರ ನಾಗನಾಥ ತರಗೆ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಿದ್ದಣ್ಣ ಅಣಬಿ, ಉಧ್ಯಮಿ ಬ್ಯಾಂಕ್ ರೆಡ್ಡಿ, ಮಲ್ಲಿನಾಥ ಕೋಲಕುಂದಿ ಕೋಡ್ಲಿ, ಗೋರಕ್ನಾಥ ಶಾಖಾಪುರ, ಬಸವರಾಜ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಮರತೂರಕರ್ ಅವರು ಭಾಗವಹಿಸಲಿದ್ದು, ಈ ವೇಳೆ ಆರ್ಕಿಟಿಕ್ ಇಂಜೀನಿಯರ್ ರುದ್ರಮುನಿ ಪುರಾಣಿಕ್, ಇಂಟಿರಿಯರ್ ಇಂಜೀನಿಯರ್ ಶ್ರೀಕಾಂತ ವಿಶ್ವಕರ್ಮ, ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ ಶ್ರೀಗಳು ಹೆಚ್ಚನ ಸಂಖ್ಯೆಯಲ್ಲಿ ಸದ್ಭಕ್ತರು ಶ್ರೀಮಠಕ್ಕೆ ಆಗಮಿಸಿ ಗುರುವಿನ ಕೃಪೆಗೆ ಪಾತ್ರಗಾಗಬೆಕೆಂದು ಹೆಳಿದರು.
ಪ್ರಮುಖರಾದ ಕಾಳಗಿ ಗ್ರಾಪಂ.ಮಾಜಿ ಅಧ್ಯಕ್ಷ ಪರಮೇಶ್ವರ ಮಡಿವಾಳ, ಹಣಮಂತ ಸೇಗಾಂವಕರ್, ಹರೀಶ ಸಿಂಗೆ, ಮಹೇಶ ಭರತನೂರ ಸೇರಿದಂತೆ ಇದ್ದರು.