ಸುಗಮ ಸಂಗೀತ ಕಾರ್ಯಕ್ರಮ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ನ.15: ತಾಲೂಕಿನ ಕೋಗಳಿ ಗ್ರಾಮದಲ್ಲಿ ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ, ವಿಜಯನಗರ ಇವರ ಸಹಯೋಗದಲ್ಲಿ ಈ  ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,  ಶ್ರೀ ಪಂಚಾಕ್ಷರ ಸಂಗೀತ ಕಲಾ ಸಂಘ ಇವರ ಸಹಭಾಗಿತ್ವದಲ್ಲಿ ಸುಗಮ ಸಂಗೀತ ಕಾರ್ಯಕ್ರಮವನ್ನು ಗಾಯಕ ಸಿ. ಪ್ರಶಾಂತ್ ಇವರು ನಡೆಸಿ ಕೊಟ್ಟರು.
ನಂತರ ಶ್ರೀ ಪಂಚಾಕ್ಷರ ಕಲಾ ಸಂಘದ ಅಧ್ಯಕ್ಷರಾದ ಎಚ್. ಎಮ್. ಶಂಕ್ರಯ್ಯ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಸ್ಪೂರ್ತಿಯಾಗಿ ಕೆಲಸ ಮಾಡುತ್ತಿದೆ ಕಲಾವಿದರು ಇದನ್ನು ಸದುಪಯೋಗ ಪಡೆದುಕೊಂಡು ಕಲೆಯನ್ನು ಬೆಳೆಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾರ್ಮೋನಿಯಂ ವಾದಕರಾಗಿ ಬಿ ಸೋಮಶೇಖರ್ ಗವಾಯಿಗಳು ಇಟ್ಟಿಗಿ, ಕ್ಯಾಷಿಯೋ ಅಭಿಷೇಕ್ ಕೋಗಳಿ, ತಬಲಾ ಎಚ್ ಎಂ ಕೊಟ್ರಯ್ಯ ಕೋಗಳಿ ಇವರು ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಎಚ್ ಎಂ ವಿಶ್ವನಾಥಗೌಡ್ರು, ಎಂ.ಮಹೇಶಪ್ಪ, ಎಚ್. ವೀರಭದ್ರಪ್ಪ, ಬಿ.ಚನ್ನಬಸಪ್ಪ, ಟಿ. ಶಿವರುದ್ರಪ್ಪ, ಕೆ. ಮಲ್ಲಿಕಾರ್ಜುನ್ ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.