ಸುಗಟೂರಿನ ರಾಮಯ್ಯನ ಕೆರೆ ಅಭಿವೃದ್ಧಿ ಕಾಮಗಾರಿ

ಕೋಲಾರ,ನ,೨:ಶ್ರೀ.ಕ್ಷೇ.ಧ.ಗ್ರಾ.ಯೋ. ಟ್ರ ಸ್ಟ್ ವತಿಯಿಂದ ಡಾವಿರೇಂದ್ರಹೆಗ್ಗಡೆಯವರ ಮಾರ್ಗದರ್ಶನದಲ್ಲಿ ” ನಮ್ಮಊರು ನಮ್ಮಕೆರೆ”ಕಾರ್ಯಕ್ರಮದಡಿಯಲ್ಲಿ ಕೆರೆಯ ಹುಳೆತ್ತುವ ಕಾರ್ಯಕ್ರಮ ಹಾಗೂ ಕೆರೆ ಪುನಶ್ಚೇತನ ಕಾರ್ಯಕ್ರಮ ನಡೆಸುವುದರ ಮೂಲಕ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ.
ಈ ಕಾರ್ಯಕ್ರಮದಡಿಯಲ್ಲಿ ಕಳೆದ ಸಾಲಿನಲ್ಲಿ ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ರಾಮಯ್ಯನ ಕೆರೆ ಹುಳೆತ್ತುವ ಹಾಗೂ ಕೆರೆ ಪುನಶ್ಚೇತನ ಕಾರ್ಯಕ್ರಮವನ್ನು ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ೨೩ ಎಕರೆ ವಿಸ್ತೀರ್ಣವಿರುವ ರಾಮಯ್ಯನ ಕೆರೆ ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು.
ಶ್ರೀ.ಕ್ಷೇ.ಧ.ಗ್ರಾ.ಯೋ(ರಿ) ಸಹ ಬಾಗಿತ್ವದಲ್ಲಿ ಸುಗಟೂರು ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ ಹಾಗೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಹಾಗೂ ಊರಿನ ಮುಖಂಡರು ಗ್ರಾಮಸ್ಥರ ಸಹಕಾರದಿಂದ ಕೆರೆಯಲ್ಲಿ ಹುಳೆತ್ತುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು.
ಈ ಕೆರೆಯು ಪ್ರಸ್ತುತ ವರ್ಷದಲ್ಲಾದ ಮಳೆಯಿಂದಾಗಿ ಹಾಗೂ ಕೆ.ಸಿ ವ್ಯಾಲಿ ನೀರು ಅಗ್ರಹಾರ ಕೆರೆ ಕೋಡಿ ಹರಿದು ಕೆರೆಗೆ ಸೇರಿರುವುದರಿಂದ ಈಗ ಈ ಕೆರೆಯು ತುಂಬಿ ಕೋಡಿ ಹರಿಯುತ್ತಿದೆ.
ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌ಜೆ. ಹಾಗೂ ಕೆರೆಯ ಸಮಿತಿಯ ಅಧ್ಯಕ್ಷ ನಾರಾಯಣಗೌಡ ಹಾಗೂ ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ್ ಎಸ್.ರವರು ಕೆರೆ ತುಂಬಿ ಹರಿಯುತ್ತಿರುವ ದೃಶ್ಯವನ್ನು ವೀಕ್ಷಣೆ ಮಾಡಿದರು.
ಕೆರೆ ಸಮಿತಿ ಅಧ್ಯಕ್ಷ ನಾರಾಯಣಗೌಡರವರು ನಮ್ಮ ಕೆರೆಯು ಈ ರೀತಿ ತುಂಬಿ ಸುಮಾರು ೧೬ ವರ್ಷಗಳ ನಂತರ ಮತ್ತೆ ನಮ್ಮ ಕೆರೆಯು ಭರ್ತಿ ಆಗಿರುತ್ತದೆ. ಇದರಿಂದಾಗಿ ಈ ಭಾಗದ ಸುತ್ತ ಮುತ್ತಲಿನ ೭೦ ರಿಂದ ೮೦ ಬೋರ್‌ವೆಲ್‌ಗಳು ಮರುಪೂರ್ಣವಾಗಿದ್ದು ಈ ಭಾಗದ ರೈತರಿಗೆ ಕೃಷಿ ಕೆಲ ಸಗಳಿಗೆ ತುಂಬಾ ಅನುಕೂಲವಾಗಿದ್ದು, ರೈತರು ಕೆರೆ ತುಂಬಿರುವುದರಿಂದ ತುಂಬಾ ಸಂತಸ ಮತ್ತು ಹರ್ಷವ್ಯಕ್ತಪಡಿಸಿರುತ್ತಾರೆ,
ಕೆರೆ ಸಮಿತಿ ಅಧ್ಯಕ್ಷ ಎಸ್.ವಿ ನಾರಾಯಣಗೌಡರು ಹರ್ಷವ್ಯಕ್ತ ಪಡಿಸಿರುತ್ತಾರೆ. ಸಮಿತಿ ಅಧ್ಯಕ್ಷ ನಾರಾಯಣಗೌಡ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡು ನಮ್ಮ ಕೆರೆಯನ್ನು ಅಭಿವೃದ್ಧಿ ಗೊಳಿಸದಂತಹ ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಸಂಸ್ಥೆಯ ಪದಾಧಿಕಾರಿಗಳಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ರಾಜೇಶ್ ಇದ್ದರು.