ಸುಖ ಶಾಂತಿ ಸಮೃದ್ಧಿ ಬದುಕಿಗೆ ಸಂಸ್ಕಾರ ಅಗತ್ಯ:ತಪೋವನಮಠದ ಡಾ. ಸಿದ್ದರಾಮಶಿವಾಚಾರ್ಯರು

ಕಲಬುರಗಿ:ನ. 13:ಭೌತಿಕ ಸಂಪತ್ತಿಗಿಂದ ಅಧ್ಯಾತ್ಮೀಕ ಸಂಪತ್ತು ಶಾಸ್ವತ, ಸುಖ-ಶಾಂತಿ, ಸಮೃದ್ಧಿ ಬದುಕಿಗೆ ಸಂಸ್ಕಾರ ಅಗತ್ಯ, ಮಠಗಳಿಂದ ಸಂಸ್ಕಾರ, ಸಂಸ್ಕøತಿ ಮತ್ತಷ್ಟು ಪುನರೋಥಾನ ಗೊಳ್ಳಲೆಂದು ಶಖಾಪೂರ ತಪೋವನಮಠದ ಡಾ. ಸಿದ್ದರಾಮ ಶಿವಾಚಾರ್ಯರು ನುಡಿದರು.

ಅವರು ಓಂಕಾರ ಬೇನೂರಿನ ಶ್ರೀ ಗುರುಮಾಹಾಂತೇಶ್ವರ ಸಂಸ್ಥಾನ ಮಠದ ಲಿಂ. ದೊಡ್ಡೇಶ್ಚರ ಶಿವಾಚಾರ್ಯ ಮಹಾಸ್ವಾಮಿಗಳವರ 103ನೇ ಪುಣ್ಯಸ್ಮರಣೋತ್ಸವದ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನದಲ್ಲಿ ಧರ್ಮಗಳು ಹಲವಾದರೂ ಆರಾಧಿಸುವ ದೈವ ಬೇರೆ ಬೇರೆಯಾದರೂ ಎಲ್ಲರ ಗುರಿ ಮಾನವ ಕಲ್ಯಾಣ ಆಗಿದೆ. ಲಿಂ. ದೊಡ್ಡೇಶ್ವರ ಶಿವಾರ್ಚಾರ ಶ್ರೀಗಳು ಧಾರ್ಮಿಕ ಸೇವೆಯು ಯಾರೂ ಮರೆಯುವಂತಿಲ್ಲ. ಅವರ ಮಾರ್ಗದರ್ಶನದಲ್ಲಿ ಸಿದ್ದರೋಣುಕಾ ಶಿವಾಚಾರ್ಯರು ಧಾರ್ಮಿಕ ಕಾರ್ಯಗಳು, ನಡೆಸುತ್ತಿರುವುದು ಸಂತೋಷದ ಸಂಗತಿ ಎಂದು ನುಡಿದರು. ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು. ನಂದಿಕೂರದ ಮಹೇಶ್ವರ ಮಹಾಸ್ವಾಮಿಗಳು, ಬೆಳಗುಪ್ಪಾದ ಪರವತಲಿಂಗ ಶಿವಾಚಾರ್ಯರು, ಆಳಂದ ಸಿದ್ದಲಿಂಗ ಶಿವಾಚಾರ್ಯರು, ಅಷ್ಠಗಿಯ ನಿಜಲಿಂಗ ಶಿವಚಾರ್ಯರು ಇದ್ದರು ಡಾ. ಜಗದೀಶ ಪೊಲೀಸ ಪಾಟೀಲ, ಶಿವರಾಜ ಬಿರಾದಾರ, ಮುರಗೆಪ್ಪ ಬಟಗೇರಾ, ಗಜೇಂದ್ರಗೌಡ ಮಾಲಿಪಾಟೀಲ ಇವರುಗಳಿಗೆ ದೊಡ್ಡೇಶ್ವರ ಶ್ರೀ ಮಹಾಲಿಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಲಿಂಗಪ್ಪ ಸಾಹೂಕಾರ, ಹಣಮಂತರಾವ ಇಂಗಿನಶೆಟ್ಟಿ, ಶಿವು ಇಂಗಿನಶೆಟ್ಟಿ, ಬಸವರಾಜ ಪೊಲೀಸ ಪಾಟೀಲ, ಮಹಾಲಿಂಗಪ್ಪ ಪೊಲೀಸ ಪಾಟೀಲ, ವೈಜನಾಥಗೌಡ ಪೊಲೀಸ ಪಾಟೀಲ, ಈರಂತಪ್ಪ ಚಳಗೇರಿ, ಜಗನ್ನಾಥ ಗೋಧಿ ಸಾಹುಕಾರ, ಶಾಂತಪ್ಪಗೌಡ ನಿಪ್ಪಾಣಿ ಇದ್ದರು. ಅಣ್ಣಾರಾವ ಶೆಳ್ಳಗಿ ಮತ್ತಿಮೂಡ ಹಾಗೂ ಕು. ವಿಶ್ವಮಯ ಭಾವಿಕಟ್ಟಿ ಬೆಂಗಳೂರು ಇವರಿಂದ ಸಂಗೀತ ಜರುಗಿತು. ವಿಶ್ವನಾಥ ಪೊಲೀಸ ಪಾಟೀಲ ಸ್ವಾಗತಿಸಿ ನಿರೂಪಿಸಿದರು.