ಸುಖ ಬದುಕಿಗೆ ಬೇಕು ಗೀತಾಸಾರ

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.16:ಮಹಾಭಾರತ ವಿಶ್ವದ ಅತಿ ದೊಡ್ಡ ಮಹಾಕಾವ್ಯ. ಭಗವದ್ಗೀತೆ ಅದರಲ್ಲಿನ ಒಂದು ಸಣ್ಣ ಭಾಗ. ಅದು ಭೀಷ್ಮ ಪರ್ವದಲ್ಲಿರುವ, ಪ್ರತಿಯೊಬ್ಬರಿಗೂ ಜೀವನ ವಿಧಾನವನ್ನು ಬೋಧಿಸುವ ಅತಿ ಮುಖ್ಯಭಾಗ. ಅದರಲ್ಲಿ ಜೀವನ ಸಾಗರವನ್ನು ದಾಟುವ ಸಣ್ಣಸಣ್ಣ ಸುಂದರ ಸೂತ್ರಗಳಿವೆ ಎಂದು ನಿವೃತ್ತ ಪ್ರಾಚಾರ್ಯ ಜಿ.ಆರ್.ಕುಲಕರ್ಣಿ ಹೇಳಿದರು.
ಹಿರಿಯ ನಾಗರಿಕರ ವೇದಿಕೆಯ ಮಾಸಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಭೆಯ ಇನ್ನೊಬ್ಬ ಉಪನ್ಯಾಸಕÀ ಚಾರ್ಟರ್ಡ ಅಕೌಂಟಂಟ ಶರಣಪ್ಪ ಹುಂಡೇಕಾರ ಮಾತನಾಡಿ, ಆದಾಯಕರ ಪಾವತಿ, ಅದರಲ್ಲಿನ ವಿನಾಯತಿಗಳು, ಸೆಸ್, ರಿಬೇಟ್ ಮುಂತಾದವುಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ನ್ಯೂಜಿಲ್ಯಾಂಡ ದೇಶದ, ಬಸವ ಬಳಗದ ಅಧ್ಯಕ್ಷ ಲಿಂಗಣ್ಣ ಕಲಬುರ್ಗಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಆ ದೇಶದ ಜನ-ಸಂಪ್ರದಾಯಗಳು ಹಾಗೂ ವಿಶೇಷತೆಗಳ ಕುರಿತು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ನಾಗರಿಕರ ವೇದಿಕೆಯ ಉಪಾಧ್ಯಕ್ಷ ಸಾಹಿತಿ ಸುಭಾಸ ಯಾದವಾಡ ಮಾತನಾಡಿ, ಭಗವದ್ಗೀತೆ ಹಾಗು ಆನಂತರ ಶ್ರೀಕೃಷ್ನ ಅರ್ಜುನನಿಗೆ ಹೇಳಿದ ಅನುಗೀತೆ ಬಗ್ಗೆ ವಿವರಿಸಿದರು.
ಮಹಾದೇವ ಸ್ವಾಗತಿಸಿದರು. ಕೋಶಾಧ್ಯಕ್ಷÀ ಜಗದೀಶ ಮೋಟಗಿ ವಂದಿಸಿದರು.
ಹೊಸದಾಗಿ ವೇದಿಕೆಗೆ ಆಗಮಿಸಿದ ಹಿರಿಯ ನಾಗರಿಕರಿಗೆ ಹಾಗೂ ಮಾರ್ಚ್ ತಿಂಗಳಲ್ಲಿ ಹುಟ್ಟಿದ ಹಿರಿಯ ನಾಗರಿಕರಿಗೆ ಪುಷ್ಟವನ್ನು ಕೊಟ್ಟು ಗೌರವದಿಂದ ಸ್ವಾಗತಿಸಲಾಯಿತು.