
ಗುವಹಟಿ, ಏ.೮- ತೇಜ್‌ಪುರ್ ವಾಯು ನೆಲೆಯಿಂದ ಸುಖೋಯ್-೩೦ ಯುದ್ದ ವಿಮಾನದ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾರಾಟ ನಡೆಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
೨೦೦೯ರಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಸುಖೋಯ್-೩೦ ಎಂಕೆಐ ಯುದ್ದ ವಿಮಾನದಲ್ಲಿ ಪುಣೆ ವಾಯುನೆಲೆಯಿಂದ ಯುದ್ದ ವಿಮಾದಲ್ಲಿ ಹಾರಾಟ ನಡೆಸಿದ್ದರು.
ಅದಾದ ನಂತರ ಇದೀಗ ತೇಜ್ ಪುರ್ ವಾಯು ನೆಲೆಯಲ್ಲಿ ಸುಖೋಯ್ ಯುದ್ದ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಹೊಸ ಅನುಭವ ಪಡೆದರು. ಈ ಮೂಲಕ ಸುಖೋಯ್ ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ ಎರಡನೇ ಮಹಿಳಾ ರಾಷ್ಟ್ರಪತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಗಜ್ ಉತ್ಸವಕ್ಕೆ ಚಾಲನೆ
ಅಸ್ಸಾಂ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಗಜ ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪ್ರಕೃತಿ ಮತ್ತು ಮಾನವೀಯತೆಯ ನಡುವೆ ಪವಿತ್ರ ಸಂಬಂಧವಿದೆ.
“ಪ್ರಕೃತಿಯನ್ನು ಗೌರವಿಸುವ ಸಂಸ್ಕೃತಿ ನಮ್ಮ ದೇಶದ ಗುರುತಾಗಿದೆ, ಭಾರತದಲ್ಲಿ, ಪ್ರಕೃತಿ ಮತ್ತು ಸಂಸ್ಕೃತಿ ಒಂದಕ್ಕೊಂದು ಸಂಬಂಧ ಹೊಂದಿದೆ ಮತ್ತು ಪರಸ್ಪರ ಪೋಷಣೆಯನ್ನು ಪಡೆಯುತ್ತಿದೆ. ನಮ್ಮಲ್ಲಿ ಆನೆಗಳನ್ನು ಹೆಚ್ಚು ಗೌರವಿಸಲಾಗಿದೆ ಎಂದು ಹೇಳಿದರು
“ಪ್ರಕೃತಿಯನ್ನು ಗೌರವಿಸುವ ಸಂಸ್ಕೃತಿ ನಮ್ಮ ದೇಶದ ಅಸ್ಮಿತೆಯಾಗಿದೆ, ಭಾರತದಲ್ಲಿ, ಪ್ರಕೃತಿ ಮತ್ತು ಸಂಸ್ಕೃತಿ ಒಂದಕ್ಕೊಂದು ಸಂಬಂಧ ಹೊಂದಿದೆ ಮತ್ತು ಪರಸ್ಪರ ಪೋಷಣೆಯನ್ನು ಪಡೆಯುತ್ತಿದೆ. ಸಂಪ್ರದಾಯದಲ್ಲಿ ಆನೆಗಳನ್ನು ಹೆಚ್ಚು ಗೌರವಿಸಲಾಗಿದೆ. ಭಾರತದ ರಾಷ್ಟ್ರೀಯ ಪರಂಪರೆಯ ಪ್ರಾಣಿ. ಆದ್ದರಿಂದ, ಆನೆಗಳನ್ನು ರಕ್ಷಿಸುವುದು ನಮ್ಮ ರಾಷ್ಟ್ರೀಯ ಪರಂಪರೆಯನ್ನು ಸಂರಕ್ಷಿಸುವ ನಮ್ಮ ರಾಷ್ಟ್ರೀಯ ಜವಾಬ್ದಾರಿಯ ಪ್ರಮುಖ ಭಾಗವಾಗಿದೆ” ಎಂದು ಹೇಳಿದ್ದಾರೆ.
ಅಸ್ಸಾಂನ ಕಾಜಿರಂಗ ಮತ್ತು ಮಾನಸ್ ರಾಷ್ಟ್ರೀಯ ಉದ್ಯಾನಗಳು ಭಾರತಕ್ಕೆ ಮಾತ್ರವಲ್ಲದೆ ಇಡೀ ಪ್ರಪಂಚದ ಅಮೂಲ್ಯ ಪರಂಪರೆಯಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಆದ್ದರಿಂದಲೇ ಇವುಗಳಿಗೆ ಯುನೆಸ್ಕೋ ‘ವಿಶ್ವ ಪರಂಪರೆಯ ತಾಣ’ ಸ್ಥಾನಮಾನ ನೀಡಿದೆ ಎಂದು ಹೇಳಿದರು.