ಸುಖಿ ಸಂಸ್ಥೆಯಿಂದ ಸರ್ಕಾರಿ ಶಾಲೆ ಜೀರ್ಣೋದ್ಧಾರ

ವಿಶೇಷ ವರದಿ ಚಂದ್ರಶೇಖರ ಮದ್ಲಾಪೂರ
ಮಾನವಿ.ಜ.೦೨- ಹೊಸ ವರ್ಷವನ್ನು ಅತ್ಯಂತ ವಿಭಿನ್ನವಾಗಿ ಆಚರಣೆ ಮಾಡಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ಪಟ್ಟಣದ ಸುಖಿ ಸಂಸ್ಥೆಯ ಯುವಕರ ಬಳಗಯೊಂದು ಸರ್ಕಾರಿ ಶಾಲೆ ಜೀರ್ಣೋದ್ಧಾರ ಹಾಗೂ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಮಾಡಿ ನಗದು ಒಂದು ಲಕ್ಷ ಬಹುಮಾನದೊಂದಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ.
ಪಟ್ಟಣದ ವಾರ್ಡ್ ೧೧ ರಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಬಹಳ ಸುಸ್ಥಿತಿಯನ್ನು ಕಂಡ ಸುಖಿ ಸಂಸ್ಥೆಯ ಯುವಕರ ಬಳಗಯೊಂದು ಸ್ವತಃ ಖರ್ಚಿನೊಂದಿಗೆ ಅದಕ್ಕೆ ಸುಣ್ಣಬಣ್ಣವನ್ನು ಬಳಿದು ಸಂಪೂರ್ಣವಾಗಿ ಸ್ವಚ್ಚತಾ ಕಾರ್ಯವನ್ನು ಮಾಡಿ ವಾರ್ಡಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ಇದಲ್ಲದೆ ರಾಜ್ಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ ಏನಾದರೂ ಕೆಲಸ ಮಾಡಬೇಕು ಎಂದು ಈ ಸಂಸ್ಥೆಯು ಇದೇ ಜನವರಿ ೮ ರಂದು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಉತೀರ್ಣರಾದ ವಿದ್ಯಾರ್ಥಿಗೆ ಪ್ರಥಮ ಬಹುಮಾನ ಒಂದು ಲಕ್ಷ, ದ್ವಿತೀಯ ಐವತ್ತು ಸಾವಿರ, ತೃತೀಯ ಇಪ್ಪತೈದು ಸಾವಿರ ರೂಪಾಯಿ ಸೇರಿದಂತೆ ಈ ಪರೀಕ್ಷೆಯ ಪಾಸಾಗಿರುವ ಕನಿಷ್ಠ ೧೦೦ ಜನರಿಗೆ ಅತ್ಯುತ್ತಮ ಪುಸ್ತಕಗಳನ್ನು ನೀಡುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ ನಮ್ಮ ರಾಜ್ಯದ ಯಾವುದೇ ಜಿಲ್ಲಾ ಅಥವಾ ತಾಲೂಕಿನಿಂದ ವಿದ್ಯಾರ್ಥಿಗಳು ಭಾಗವಹಿಸಲು ಸಂಸ್ಥೆಯ ೭೩೩೭೬೬೬೧೦೯, ೭೪೮೩೮೫೧೦೯ ಇವರನ್ನು ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದಾರೆ.