ಸುಖ,ದು:ಖದ ಮದ್ಯದಲ್ಲಿ ಜೀವ ಒದ್ದಾಡುತ್ತಿದೆ:ಪಡೇಕನೂರಶ್ರೀ

ತಾಳಿಕೋಟೆ:ಮಾ.4: ಅನೇಕ ವರ್ಷಗಳಿಂದ ಜಗತ್ತಿನಲ್ಲಿ ಮಾನವ ಜನ್ಮತಾಳಿದ ಮೇಲೆ ಎರಡು ಬಗೆಯ ಮನಸ್ಸುಗಳು ಬೆನ್ನುಹತ್ತಿದ್ದು ಒಂದು ವ್ಯವಸಾಯಗೊಂಡಿರತಕ್ಕಂತಹ ಹೃದಯ, ಭಾವ, ಇಂದ್ರಿಗಳು, ಇನ್ನೊಂದು ಮನಸ್ಸು ಅವ್ಯವಸಾಯ ಎನ್ನುವಂತಹದ್ದು ಅನೇಕ ಶಾಖೆಗಳಿಗೆ ಹಾರುವ ಅನೇಕ ವಸ್ತುಗಳನ್ನು ಕಲ್ಪನೆ ಮಾಡುವ ಮನಸ್ಸೆಂಬುದು ಹಾರುತ್ತಾ ಸಾಗುತ್ತದೆ ಎಂದು ಪಡೆಕನೂರ ದಾಸೋಹ ಮಠದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.
ಶುಕ್ರವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಮಂದಿರದ ಆವರಣದಲ್ಲಿ ಸಾಗಿಬಂದ ಶ್ರೀ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 11ನೇ ದಿನದಂದು ಪ್ರವಚನ ಮುಂದುವರೆಸಿ ಮಾತನಾಡುತ್ತಿದ್ದ ಅವರು ಯಾವ ರೀತಿ ಗಿಡದ ಆದಾರಸ್ಥಂಬವಾಗಿ ಅದರ ಬಡ್ಡಿಯಾಗಿರುತ್ತದೆಯೋ ಹರಗೊಂಡಂತಹ ಬುದ್ದಿ ಪ್ರೀತಿ ಪ್ರೇಮ ಹೃದಯದಿಂದ ತುಂಬಿಕೂಡಿರತಕ್ಕಂತಹ ಮನಸ್ಸು ಯಾವುದಕ್ಕೂ ಅಂಟಿಕೊಂಡಿರತಕ್ಕಂತಹ ವ್ಯವಸಾಯಾತ್ಮಕ ಬುದ್ದಿ ಎನ್ನುತ್ತಾರೆಂದರು. ವ್ಯವಸ್ಥಿತವಾಗಿರುವ ವಸ್ತು ಅಲ್ಲಾ ಇಂದ್ರಿಗಳು, ಬಾವಗಳು ಇಲ್ಲಾ ಬಹು ಶಾಖೆಗಳಿಗೆ ಹೊಂದಿರತಕ್ಕಂತಹ ಅವ್ಯವಸ್ಥೆಯ ಮನಸ್ಸು ಅನ್ನುತ್ತಾರೆಂದರು. ಇಬ್ಬರ ರೈತರ ಜಮೀನುಗಳ ನಡುವೆ ಒಂದೇ ಒಡ್ಡು ಇತ್ತು ಎರಡೂ ಜಮೀನು ಎರೆ ಭೂಮಿಯಂತಿದ್ದವು ಆದರೆ ಅದರಲ್ಲಿ ಒಬ್ಬ ರೈತ ಸರಿಯಾಗಿ ಗೊಬ್ಬರ ಹಾಕಿ ಹದಮಾಡಿದಾಗ ಮಳೆ ಸಹೇತ ಬಂತು ಭೂಮಿ ಸಮತಾಳವಾಗಿದ್ದರಿಂದ ಬಿತ್ತಿದ ಜೋಳ ಸುಂದರವಾಗಿ ತೆನೆ ಬಿಟ್ಟಿತು ನೂರಾರು ಚೀಲ ಕಾಳುಬಂತು ಯಾಕೆಂದರೆ ಆತ ಭೂಮಿಯನ್ನು ರಾಬು ಮಾಡಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ್ದೇ ಇದಕ್ಕೆ ಕಾರಣವಾಯಿತು.
ಇನ್ನೋಬ್ಬ ಅದರ ಮಗ್ಗಲಿನ ರೈತ ಆ ಹೊಲದಲ್ಲಿ ಯಾವುದೂ ರಾಬು ಮಾಡಲಾರದೇ ಏನೇನೂ ಮಾಡಲಾರದೇ ಅದೇ ಕರಕಿ ಕಡ್ಡಿ ಇರತಕ್ಕಂತಹ ಹೊಲದಲ್ಲಿ ಬಿತ್ತಿ ಬೆಳೆಯಲು ಮುಂದಾದ ಆದರೆ ಆ ಹೊಲದಲ್ಲಿ ಏನೂ ಬೆಳೆಯಲೇ ಇಲ್ಲಾ ಯಾಕೆಂದರೆ ಕಸ ಕಡ್ಡಿ ಬೆಳೆದಿದೆ ಹೊಲದಲ್ಲಿ ಬಿತ್ತಿದ ಬೆಳೆ ಕಮರಿಹೋಗಲು ಕಾರಣವಾಯಿತು ಇದಕ್ಕೆ ಅವ್ಯವಸಾಯ ಮನ ಇದುದ್ದೇ ಕಾರಣವಾಯಿತೆಂದು ಶ್ರೀಗಳು ನುಡಿದರು. ಸಂಸ್ಕಾರಗೊಂಡಿರತ್ತಕ್ಕಂತಹ ಭಕ್ತಿಭಾವ ತುಂಬಿದ ಮನಸ್ಸು ಬಹಳೇ ಆನಂದಬರೀತವಾಗಿರುತ್ತದೆ ಆದರೆ ರಾಗ ದ್ವೇಶ ಮಸ್ತರ ಕಲ್ಮಷ ತುಂಬಿದ ಮನಸ್ಸು ಬಚ್ಚಲದ ನೀರಿನಂತೆ ಮೈಲಿಗೆಯ ನೀರು ಎಂದು ಕರೆಯುತ್ತಾರೆಂದರು. ಮೈಲಿಗೆಯ ಮನಸ್ಸು ದುರ್ಜನರ ಸಂಘ ಬಚ್ಚಲದ ರೊಜ್ಜಿನಂತೆ ಎಂದು ಶರಣರು ಹೇಳಿದ್ದಾರೆ ಸಜ್ಜನರ ಸಂಘ ಹೆಜ್ಜೆನು ಸವೀದಂತೆ ಜೇನಿನ ಔಪಾದಿಯಲ್ಲಿರತಕ್ಕಂತವರಿಗೆ ಸಜ್ಜನರು ಎಂದು ಕರೆಯುತ್ತಾರೆಂದರು. ಯಾರೂ ತೆಗೆಯಲಾರದ ಸಂಪತ್ತು ಅದು ಶೂನ್ಯ ಸಂಪತ್ತೆಂದರು. ಶಾಸ್ವತ ಸುಖಃ ಶಾಸ್ವತ ಸಂತೃಪ್ತಿ, ಸುಖದ ಬಾಸ ಅದು ಶಾಸ್ವತ ಸುಖಃವಲ್ಲಾವೆಂದರು.
ಬೇಕು ಎನ್ನುವದು ಅದು ಸುಖಃವಲ್ಲಾ ಅಶಾಸ್ವತ ಸುಖಃವೆನ್ನುತ್ತಾರೆಂದರು. ಬೇಕೆನಿಸುವದರಲ್ಲಿ ಸುಖಃ ಎಲ್ಲಿದೆ ಶಾಂತಿಯಲ್ಲಿದೆ ಶಾಸ್ವತ ಶಾಂತಿ ದೊರೆಯಲಾರದು ಎಂದು ಬೇಕೆನ್ನುವದು ಶಾಂತಿಯ ಸುಖಃವಲ್ಲಾ ಶಾಂತಿಯ ಸುಖಃ ಭಾರತದ ಪುತ್ರನಾದವರಿಗೆ ಗೊತ್ತಾಗುತ್ತದೆ ಎಂದರು. ನೀರಿಲ್ಲದ ಕೇರೆ, ಪಕ್ಕವಿಲ್ಲದ ಪಕ್ಷೀ ಜೀವನದಲ್ಲಿ ಗುರಿ ಇಲ್ಲದಿದ್ದರೆ ಒಣಗಿದ ಭಾವ ಭಕ್ತಿ ಭಾವವಿಲ್ಲದ ಪರೋಪಕಾರವಿಲ್ಲಾ ಬರೇ ಕತ್ತಲೆ ಈ ಕತ್ತಲೆಯೊಳಗೆ ಲಿಂಗವಿಲ್ಲಾ ಭಕ್ತಿಯಿಂದ ಕೂಡಿದವನಿಗೆ ನಿಜಮಾನವನೆಂದು ಕರೆದರೆಂದರು. ಅಜ್ಞಾನ ಕತ್ತಲೆಯಿಂದ ಎಚ್ಚರಿಸಲು ಮುಂದಾದ ಅಲ್ಲಮ ಶಿವಯೋಗಿ ಧರ್ಮ ಜ್ಞಾನದ ಕೆಲಸ ಮಾಡಲಿಕ್ಕೆ ಮುಂದಾದ ಕೃಷಿಕ ಗುರುಭಕ್ತನ ಸಂಸ್ಕಾರಹೊಂದಿದ ರೈತ ಆತನ ತೋಟದಲ್ಲಿ ಸಂಸ್ಕಾರಹೊಂದಿದ್ದ ಹಣ್ಣು ಹಂಪಲ ಅನೇಕ ರೀತಿಯ ಆದರ ಸತ್ಕಾರ ಮಾಡುವಂತಹ ಹಣ್ಣು ಹಂಪಲು ಹುಲಸಾಗಿ ಬೆಳೆದು ನಿಂತಿದ್ದವು ಆತನ ಪತ್ನಿ ಮಕ್ಕಳು ಕೂಡಾ ಆಗುರುಭಕ್ತನ ಸಂಸ್ಕಾರ ಹೊಂದಿದ್ದರೆಂದು ಶ್ರೀಗಳು ಹೇಳಿದರು.
ಪರೋಪಕಾರಕ್ಕಾಗಿ ಇದ್ದ ಈ ರೈತನಿಗೆ ಸಂತೃಪ್ತಿ ಎಂಬುದು ಇತ್ತು ಯಾವುದೇ ಅತೃಪ್ತಿ ಎಂಬುದು ಇದಿದ್ದಿಲ್ಲಾ ಎಲ್ಲವೂ ನಿನ್ನದೇ ಎನ್ನುವ ಭಾವ ಒಂದು ಆತನಲ್ಲಿ ಇದಿದ್ದಿಲ್ಲಾ ಆ ರೈತನ ಹೆಸರೇ ಗೊಗ್ಗಯ್ಯ, ಆ ರೈತನ ಮಗ್ಗಲಿನ ರಸ್ತೆಗುಂಟಾ ಹೊರಟಿದ್ದ ಅಲ್ಲಮನನ್ನು ನೋಡಿದ ರೈತ ಪತಿ ಪತ್ನಿ ಮಕ್ಕಳು ಸಹೇತ ಅಲ್ಲಮನಿಗೆ ನಮಸ್ಕರಿಸಿ ತೋಟದಲ್ಲಿ ಬಂದು ಅತಿಥ್ಯ ಸತ್ಕಾರ ಪಡೆದುಕೊಳ್ಳುವಂತೆ ವಿನಂತಿಸುತ್ತಾರೆ ಅವರ ಮಾತಿಗೆ ಒಪ್ಪಿ ಅಲ್ಲಮನು ತೋಟದಲ್ಲಿ ತಮ್ಮ ಪಾದವನ್ನಿಟ್ಟು ಪ್ರವೇಶಿಸುತ್ತಾರೆ ಮುಂದೆ ಗುಗ್ಗಯ್ಯ ರೈತ ನಟ್ಟು ಕಡಿಯುತ್ತಿದ್ದ ಸ್ಥಳವನ್ನು ಕಡಿದು ಮುಗಿಸಬೇಕೆಂದು ಹಾತುರತೆಯಿಂದ ಗುದ್ದಲಿಯನ್ನು ತೆಗೆದುಕೊಳ್ಳುತ್ತಾನೆ ಅಲ್ಲಮರು ಆ ಗುದ್ದಲಿ ಯಾರದು ಎಂದು ಪ್ರಶ್ನೀಸುತ್ತಾರೆ ಆ ರೈತ ನಂದು ಎನ್ನುವ ಭಾವ ತೋರುತ್ತಾನೆ ಮುಂದೆ ಅದೇ ರೈತನಿಗೆ ಆತನ ಎಲ್ಲ ಅಂಗಾಂಗದ ಹೆಸರುಗಳನ್ನು ಕೇಳುತ್ತಾರೆ ಆಗ ರೈತ ಉತ್ತರಿಸಿದ ನೀನು ಯಾರು ಎಂದು ಪ್ರಶ್ನೆ ಅಲ್ಲಮನು ಇತ್ತಾಗ ಅದನ್ನು ಆ ರೈತ ಅರ್ಥೈಸಿಕೊಳ್ಳದೇ ದಿಗ್ಭ್ರಮೆಗೊಂಡ ಯಾವುದೇ ಮಾತನಾಡಿದರೆ ಮನುಷ್ಯ ತಾನು ದೊಡ್ಡವನಾಗಬೇಕು ಅಂತಹದ್ದನ್ನೇ ಮಾತನಾಡಬೇಕು ಮದುರತೆಯಲ್ಲಿ ಧರ್ಮವಿದೆ ಶ್ರೇಷ್ಠ ಜ್ಞಾನದ ಮಾತು ರೈತನನ್ನು ಬಡೆದೆಬ್ಬಿಸುವ ಮಾತು ಅಲ್ಲಮನದಾಗಿತ್ತೆಂದರು. ಶರಣ ಗೊಗ್ಗಯ್ಯ ಯಾರು ನನಗೆ ನನ್ನದೆಂಬ ಬ್ರಾಂತಿ ಬಿಡಿಸಿದ್ದಿಲ್ಲಾ ನಾನೇ ಬೇರೆ ಬುದ್ದಿ ಪ್ರಾಣ ಬೇರೆ ನಾನು ಆತ್ಮ ಸ್ವರೂಪವೆಂಬುದನ್ನು ಆ ರೈತ ತಿಳಿದುಕೊಂಡ ಈ ರೈತನ ಅಜ್ಞಾನದ ಹುಚ್ಚನ್ನು ಅಲ್ಲಮರು ಬಿಡಿಸಿದರು. ಶಬ್ದ, ರೂಪ, ರಸ, ಗಂದ ಎಂಬ ಪಂಚ ಜಾನೇಂದ್ರಿಗಳಿಗೆ ಬೇಲಿ ಹಚ್ಚಿ ಶಾಂತಿ ಮತ್ತು ಸಮಾದಾನ ಎನ್ನುವದು ಆತ್ಮ ತೃಪ್ತಿ ಎನ್ನುವದು ಸಂತೋಷದಲ್ಲಿದೆ ನಿನ್ನೊಡುವೆ ಎಂಬುದು ಜ್ಞಾನ ರತ್ನವೆಂಬುದು ಅಲ್ಲಮರು ಪರಿಚಯಿಸಿಕೊಟ್ಟರೆಂದರು.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ, ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತ ಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.