ಸುಕ್ಷೇತ್ರ ಹಾರಕೂಡ ಗ್ರಾಮಕ್ಕೆ ಸಾರಿಗೆ ಬಸ್ ಸೇವೆ

ಚಿಂಚೋಳಿ,ಮಾ.22- ಚಿಂಚೋಳಿಯಿಂದ ಸುಕ್ಷೇತ್ರ ಹಾರಕೂಡ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಹೊಸ ಬಸ್ಸ ಸೇವೆಗೆ ಹಾರಕೂಡ ಸಂಸ್ಥಾನ ಹಿರೇಮಠ ಪೀಠಾಧಿಪತಿಗಳಾದ ಶ್ರೀಡಾ. ಚೆನ್ನವೀರ ಶಿವಾಚಾರ್ಯರ ಅವರು ಚಾಲನೆ ನೀಡಿದರು.
ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಂಚೋಳಿ ಘಟಕದ ವತಿಯಿಂದ ಈ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳುವಂತೆ ಪೂಜ್ಯರು ಕರೆ ನೀಡಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಸುವರ್ಣ ಮಲಾಜಿ. ಚಿಂಚೋಳಿಯ ತಾಲೂಕ ಪಂಚಾಯತ ಅಧ್ಯಕ್ಷರಾದ ರೇಣುಕಾ ಅಶೋಕ ಚವ್ಹಾಣ. ಚಿಂಚೋಳಿಯ ಪುರಸಭೆ ಅಧ್ಯಕ್ಷರಾದ ಜಗದೇವಿ ಶಂಕರರಾವ ಗಡಂತಿ. ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ರಾಮಚಂದ್ರ ಜಾಧವ್. ಉದ್ಯಮಿದಾರರು ಅರುಣ ಕುಮಾರ ಪವಾರ.ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಅಜೀತ ಪಾಟೀಲ. ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ. ಸುಭಾಶ್ಚಂದ್ರ ಸೀಳಿನ್. ಚಂದ್ರಶೇಖರ್ ಗುತ್ತೇದಾರ ಗಾರಂಪಳ್ಳಿ. ಅಪ್ಪಣ್ಣ ಹಾರಕೂಡ. ಭೀಮಶೆಟ್ಟಿ ಮುರುಡ. ಶ್ರೀಮಂತ ಕಟ್ಟಿಮನಿ. ಸತೀಶರೆಡ್ಡಿ ತಾದಲಾಪೂರ. ಶಿವಯೋಗಿ ರುಸ್ತಂಪೂರ. ಪವನ ಕುಮಾರ ಗೋಪನಪಳ್ಳಿ. ಶ್ರೀನಿವಾಸ ಚಿಂಚೋಳಿಕರ್. ಅಭೀಷೇಕ್ ಮಲ್ಕನೋರ. ಹಣಮಂತ ಭೋವಿ. ಚಿಂಚೋಳಿಯ ಸಾರಿಗೆ ಇಲಾಖೆ ವ್ಯವಸ್ಥಾಪಕರಾದ ಎಂ. ಆರ್. ಲಮಾಣಿ. ಮತ್ತು ಸಾರಿಗೆ ಇಲಾಖೆ ಸಿಬ್ಬಂದಿಗಳು ಹಾಗೂ ಗಣ್ಯಮಾನ್ಯರು ಪಾಲ್ಗೊಂಡಿದ್ದರು.